ಕರ್ನಾಟಕ

karnataka

ETV Bharat / state

ಸವಣೂರು ನಗರದಲ್ಲಿ ರೌಡಿಶೀಟರ್​ ಬರ್ಬರ ಹತ್ಯೆ - ರೌಡಿ ಶೀಟರ್ ಕೊಲೆ

ಹಾವೇರಿಯ ಸವಣೂರು ನಗರದಲ್ಲಿ ರೌಡಿಶೀಟರ್​ ಹತ್ಯೆ ನಡೆದಿದೆ.

Rowdy Sheeter murder
ಹತ್ಯೆಯಾದ ರೌಡಿ ಶೀಟರ್ ಹಜರತ್ ಅಲಿ

By

Published : Aug 9, 2021, 8:46 AM IST

Updated : Aug 9, 2021, 9:21 AM IST

ಹಾವೇರಿ: ಕೊಡಲಿಯಿಂದ ಕೊಚ್ಚಿ ರೌಡಿಶೀಟರ್ ಓರ್ವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಸವಣೂರು ನಗರದ ಕಾರಡಗಿ ರಸ್ತೆಯಲ್ಲಿ ನಡೆದಿದೆ.

ಹಜರತ್ ಅಲಿ ಉರುಫ್‌ ಅನ್ವರ್ ಶೇಕ್ (35) ಕೊಲೆಯಾದ ವ್ಯಕ್ತಿ. ಸವಣೂರು ಪಟ್ಟಣದ ಇಮ್ರಾನ್ ಚೌದರಿ (28) ಎಂಬಾತ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಹತ್ಯೆಯಾದ ರೌಡಿ ಶೀಟರ್ ಹಜರತ್ ಅಲಿ

ರೌಡಿಶೀಟರ್ ಹಜರತ್ ಅಲಿ ಮಾರಕಾಸ್ತ್ರಗಳಿಂದ ಆರೋಪಿ ಇಮ್ರಾನ್‌ನನ್ನು ಕೊಲೆ ಮಾಡಲು ಮುಂದಾಗಿದ್ದ. ಇದೀಗ ಇಮ್ರಾನ್, ಹಜರತ್ ಅಲಿಯನ್ನೇ ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಇದನ್ನೂಓದಿ: ಯುವ ಪ್ರೇಮಿಗಳನ್ನು ಪೊಲೀಸರ ಸೋಗಿನಲ್ಲಿ ದೋಚುತ್ತಿದ್ದ ಮೂವರ ಬಂಧನ

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸವಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಹಜರತ್ ಅಲಿ ಗೋವಾ ಸೇರಿದಂತೆ ರಾಜ್ಯದಲ್ಲಿ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.

Last Updated : Aug 9, 2021, 9:21 AM IST

ABOUT THE AUTHOR

...view details