ಕರ್ನಾಟಕ

karnataka

ETV Bharat / state

ಲಾಕ್​ಡೌನ್​ಗೆ ಡೋಂಟ್​ ಕೇರ್​: ಹಾವೇರಿ ತಾಲೂಕಿನಲ್ಲಿ ನಡೆಯುತ್ತಿದೆ ರಸ್ತೆ ನಿರ್ಮಾಣ ಕಾಮಗಾರಿ - ಹಾವೇರಿ ಕೊರೊನಾ ವೈರಸ್​ ಪ್ರಕರಣಗಳು

ಹಾವೇರಿಯ ಮೇವುಂಡಿ ಗ್ರಾಮದಲ್ಲಿ ಲಾಕ್​ಡೌನ್​ ನಿಯಮ ಗಾಳಿಗೆ ತೂರಿ ರಸ್ತೆ ಕಾಮಗಾರಿ ಮಾಡುತ್ತಿದ್ದು, 15 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.

road-work-going-on-in-between-lock-down
ಹಾವೇರಿ ತಾಲೂಕಿನಲ್ಲಿ ಎಗ್ತಿಲ್ಲದೆ ಸಾಗಿದೆ ರಸ್ತೆ ನಿರ್ಮಾಣ ಕಾಮಗಾರಿ

By

Published : Mar 29, 2020, 4:15 PM IST

ಹಾವೇರಿ: ತಾಲೂಕಿನ ಮೇವುಂಡಿ ಗ್ರಾಮದ ಬಳಿ ಲಾಕ್​ಡೌನ್​​ ಬದಿಗೊತ್ತಿ ರಸ್ತೆ ನಿರ್ಮಾಣ ಕಾಮಗಾರಿ ಮಾಡಲಾಗುತ್ತಿದೆ.

ಗ್ರಾಮದಿಂದ ಕೆಮ್ಮನಗುಂಡಿಗೆ ತೆರಳುವ ಒಂದರಿಂದ ಒಂದೂವರೆ ಕಿ.ಮೀ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಹದಿನೈದಕ್ಕೂ ಅಧಿಕ ಕಾರ್ಮಿಕರು ರಸ್ತೆ‌ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ಕಾಮಗಾರಿ ಸ್ಥಳದಲ್ಲಿ ಕಾರ್ಮಿಕರು ಮಾತ್ರ ಇದ್ದು, ಗುತ್ತಿಗೆದಾರರು ಕಾಣುತ್ತಿಲ್ಲ.

ಹಾವೇರಿ ತಾಲೂಕಿನಲ್ಲಿ ಎಗ್ಗಿಲ್ಲದೆ ಸಾಗಿದೆ ರಸ್ತೆ ನಿರ್ಮಾಣ ಕಾಮಗಾರಿ

ಲಾಕ್ ಡೌನ್ ನಿಯಮ ಉಲ್ಲಂಘಿಸಿ ರಸ್ತೆ ನಿರ್ಮಾಣ ಕಾಮಗಾರಿ ಮಾಡುತ್ತಿರುವ ಹಿನ್ನೆಲೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎಲ್ಲವೂ ಲಾಕ್ ಡೌನ್ ಇದ್ದಾಗ ರಸ್ತೆ ನಿರ್ಮಾಣ ಕಾಮಗಾರಿಗೆ ಮುಂದಾಗಿರುವವರ ಮೇಲೆ ಕ್ರಮ‌ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ABOUT THE AUTHOR

...view details