ಕರ್ನಾಟಕ

karnataka

ETV Bharat / state

ಗ್ರಾ.ಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ: ಸದಸ್ಯರನ್ನು 40 ದಿನ ರೆಸಾರ್ಟ್​ನಲ್ಲಿರಿಸಿ ವಿಮಾನದಲ್ಲಿ ಕರೆತಂದ ಅರ್ಚಕ! - ಈಟಿವಿ ಭಾರತ ಕನ್ನಡ

ಗ್ರಾಮ ಪಂಚಾಯತ್​ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯಿಸಲಿದ್ದ 9 ಜನ ಸದಸ್ಯರನ್ನು 40 ದಿನ ಬೆಂಗಳೂರಿನ ರೆಸಾರ್ಟ್​ನಲ್ಲಿರಿಸಿ ಇಂದು ಅವಿಶ್ವಾಸ ಮಂಡನೆಗೆ ಕರೆತಂದಿರುವ ಘಟನೆ ಹಾವೇರಿಯ ದೇವರಗುಡ್ಡ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ.

resort-politics-in-haveri-devaragudda-gramapanchayath
ಗ್ರಾಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ : ಸದಸ್ಯರನ್ನು 40 ದಿನ ರೆಸಾರ್ಟ್​ನಲ್ಲಿರಿಸಿದ ಅರ್ಚಕ

By

Published : Dec 6, 2022, 7:58 PM IST

Updated : Dec 6, 2022, 9:19 PM IST

ಹಾವೇರಿ: ಗ್ರಾಮ ಪಂಚಾಯತಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯಿಸಲಿದ್ದ ಸದಸ್ಯರನ್ನು 40 ದಿನಗಳ ಕಾಲ ರೆಸಾರ್ಟ್‌ನಲ್ಲಿಟ್ಟು ವಿಮಾನದ ಮೂಲಕ ಕರೆತಂದಿರುವ ಘಟನೆ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ. 13 ಸದಸ್ಯ ಬಲವಿರುವ ದೇವರಗುಡ್ಡ ಗ್ರಾ.ಪಂ.ನ ಹಾಲಿ ಅಧ್ಯಕ್ಷ ಮಾಲತೇಶ್ ದುರಗಪ್ಪ ನಾಯರ್ ಒಪ್ಪಂದದಂತೆ 15 ತಿಂಗಳು ಅಧಿಕಾರ ನಡೆಸಿ ರಾಜೀನಾಮೆ ನೀಡುವುದಾಗಿ ತಿಳಿಸಿದ್ದರು.

ಗ್ರಾ.ಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ: ಸದಸ್ಯರನ್ನು 40 ದಿನ ರೆಸಾರ್ಟ್​ನಲ್ಲಿರಿಸಿ ವಿಮಾನದಲ್ಲಿ ಕರೆತಂದ ಅರ್ಚಕ!

ಆದರೆ, ಮಾಲತೇಶ್​​ 15 ತಿಂಗಳ ಬಳಿಕ ಅಧ್ಯಕ್ಷ ಸ್ಥಾನ ತ್ಯಜಿಸಲು ನಿರಾಕರಿಸಿದ್ದಾರೆ. ಗ್ರಾಮ ಪಂಚಾಯತ್​ನ 13 ಸದಸ್ಯರಲ್ಲಿ ನಾಲ್ವರು ಬಿಜೆಪಿ ಬೆಂಬಲಿತ ಸದಸ್ಯರಿದ್ದರೆ 9 ಸದಸ್ಯರು ದೇವರಗುಡ್ಡದ ಮಾಲತೇಶ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ ಭಟ್ ಬಣಕ್ಕೆ ಸೇರಿದ್ದರು. ಅಧ್ಯಕ್ಷನ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ನಿರ್ಧರಿಸಿದ್ದ ಸದಸ್ಯರನ್ನು ಮಾಲತೇಶ್​ ಮನವೊಲಿಸಬಹುದೆಂದು ಸಂಶಯಗೊಂಡ ಸಂತೋಷ ಭಟ್ ಬೆಂಗಳೂರಿನ ರೆಸಾರ್ಟ್​ನಲ್ಲಿ 40 ದಿನ ಇರಿಸಿದ್ದಾರೆ. ಬಳಿಕ ಇಂದು ನಡೆದ ಅವಿಶ್ವಾಸ ನಿರ್ಣಯಕ್ಕೆ ಈ ಸದಸ್ಯರನ್ನು ವಿಮಾನದ ಮೂಲಕ ಕರೆತಂದಿದ್ದಾರೆ.

ಇದನ್ನೂ ಓದಿ:ಚುನಾವಣೆಯಲ್ಲಿ ಸಮಾನ ಮತ: ಲಾಟರಿ ಮೂಲಕ ಗ್ರಾಪಂ ಅಧ್ಯಕ್ಷೆಯಾದ ಮಹಿಳೆ

Last Updated : Dec 6, 2022, 9:19 PM IST

ABOUT THE AUTHOR

...view details