ಹಾವೇರಿ : ರಾತ್ರಿ ಪೂರ್ತಿ ನಡುಗಡ್ಡೆಯಲ್ಲಿ ಸಿಲುಕಿದ್ದ ವ್ಯಕ್ತಿಯನ್ನ ಸ್ಥಳೀಯರು ರಕ್ಷಣೆ ಮಾಡಿದ ಘಟನೆ ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಯಡಗೋಡದಲ್ಲಿ ನಡೆದಿದೆ. ಯಡಗೋಡ ಗ್ರಾಮದ ಸಮೀಪ ಇರುವ ಕುಮದ್ವತಿ ನದಿಯ ನಡುಗಡ್ಡೆಯಲ್ಲಿ ರಾತ್ರಿ ಪೂರ್ತಿ ಕಳೆದ ವ್ಯಕ್ತಿಯನ್ನು 50 ವರ್ಷದ ಹಾಲಪ್ಪ ಕೆಳಗಿನಮನಿ ಎಂದು ಗುರುತಿಸಲಾಗಿದೆ.
ಹಿರೇಕೆರೂರು ತಾಲೂಕಿನ ಹಿರೇಮೊರಬದ ಗ್ರಾಮದ ನಿವಾಸಿಯಾಗಿರುವ ಹಾಲಪ್ಪ ಶುಕ್ರವಾರ ರಟ್ಟೀಹಳ್ಳಿ ತಾಲೂಕಿನ ಮಾದಾಪುರ ಗ್ರಾಮದ ಸಂಬಂಧಿಕರ ಮನೆಗೆ ಬಂದಿದ್ದರು ಎನ್ನಲಾಗ್ತಿದೆ. ಈ ಸಂದರ್ಭದಲ್ಲಿ ಕೈಕಾಲು ತೊಳೆಯಲು ಕುಮದ್ವತಿ ನದಿಗೆ ಹೋಗಿದ್ದ ಹಾಲಪ್ಪ ನದಿಗೆ ಬಿದ್ದಿದ್ದಾರೆ. ನಂತರ ಒಂದು ಕಿಲೋಮೀಟರ್ ದೂರದವರೆಗೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ಹಾಲಪ್ಪ, ನಡುಗಡ್ಡೆಯಲ್ಲಿ ಸಿಕ್ಕಿದ್ದ ಗಿಡಗಂಟೆಗಳನ್ನು ಹಿಡಿದುಕೊಂಡು ಆಶ್ರಯ ಪಡೆದಿದ್ದಾರೆ.