ಹಾವೇರಿ:ಜಿಲ್ಲೆಯಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದ್ದ 21 ಜನರ ವರದಿ ಕೊನೆಗೂ ನೆಗೆಟಿವ್ ಬಂದಿದೆ. ಈ ಮೂಲಕ ಜಿಲ್ಲೆಯ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ. ಇಲ್ಲಿನ ಹಾನಗಲ್ ತಾಲೂಕಿನ ಆಡೂರು ಗ್ರಾಮದ 21 ಜನರ ಗಂಟಲು ದ್ರವವನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಸದ್ಯ ಈ 21 ಜನರ ವರದಿಯೂ ನೆಗೆಟಿವ್ ಬಂದಿದೆ ಎಂದು ಜಿಲ್ಲಾಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ನಾಗರಾಜ್ ಮಾಹಿತಿ ನೀಡಿದ್ದಾರೆ.
ಆತಂಕ ಸೃಷ್ಟಿಸಿದ್ದ 21 ಜನರ ವರದಿ ನೆಗೆಟಿವ್: ನಿರಾಳರಾದ ಹಾವೇರಿ ಜನತೆ
21 ಸದಸ್ಯರನ್ನು ಹಾವೇರಿಯ ಹೊರವಲಯದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಈ ಕುರಿತಂತೆ ಭಾನುವಾರ 21 ಜನರ ರಕ್ತ ಮತ್ತು ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಸದ್ಯ ಇಂದು ಇವರೆಲ್ಲರ ವರದಿ ನೆಗೆಟಿವ್ ಬಂದಿದ್ದು, ಜಿಲ್ಲೆಯ ಜನರ ಆತಂಕ ದೂರಾದಂತಾಗಿದೆ.
ಇಲ್ಲಿನ ಆಡೂರು ಗ್ರಾಮದ ಬಿಜಾಪುರ ಎಂಬುವವರ ಮನೆಗೆ ವಿಜಯಪುರದ ಕೊರೊನಾ ಸೋಂಕಿತ 306 ಮತ್ತು 308 ಸಂಖ್ಯೆಯ ರೋಗಿಗಳು ಭೇಟಿ ನೀಡಿದ್ದರು. ಇವರಿಬ್ಬರಿಗೆ ಕೊರೊನಾ ದೃಢಪಟ್ಟ ಬೆನ್ನಲ್ಲೇ ಅವರ ಟ್ರಾವಲ್ ಹಿಸ್ಟರಿ ಪರಿಶೀಲಿಸಿದಾಗ ಅವರಿಬ್ಬರು ಆಡೂರಿನ ಈ ಕುಟುಂಬಸ್ಥರನ್ನು ಭೇಟಿಯಾಗಿದ್ದು ಪತ್ತೆಯಾಗಿತ್ತು. ಈ ಹಿನ್ನೆಲೆ ಕುಟುಂಬದ 21 ಸದಸ್ಯರ ರಕ್ತ ಹಾಗೂ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು.
ಅಲ್ಲದೆ 21 ಸದಸ್ಯರನ್ನು ಹಾವೇರಿಯ ಹೊರವಲಯದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಈ ಕುರಿತಂತೆ ಭಾನುವಾರ 21 ಜನರ ರಕ್ತ ಮತ್ತು ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಸದ್ಯ ಇಂದು ಇವರೆಲ್ಲರ ವರದಿ ನೆಗೆಟಿವ್ ಬಂದಿದ್ದು, ಜಿಲ್ಲೆಯ ಜನರ ಆತಂಕ ದೂರಾದಂತಾಗಿದೆ.