ಕರ್ನಾಟಕ

karnataka

ETV Bharat / state

ಹಾವೇರಿಯಲ್ಲಿ ಕೊರೊನಾದಿಂದ ಓರ್ವ ಗುಣಮುಖ​ - haveri Release from hospital a person news

ಪಿ-639 ಬಗ್ಗೆ ಈಗಾಗಲೇ ವೈದ್ಯಕೀಯವಾಗಿ ಅಧ್ಯಯನ ಮಾಡಲಾಗಿದೆ. ಅಲ್ಲದೆ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿದ್ದು, ಆಸ್ಪತ್ರೆಯಿಂದ ಇಂದು ಬಿಡುಗಡೆ ಮಾಡಲಾಗುತ್ತದೆ ಎಂದು ಡಾ. ರಾಜೇಂದ್ರ ತಿಳಿಸಿದರು.

Release from hospital a person recovering from corona in haveri
ಕೊರೊನಾದಿಂದ ಗುಣಮುಖನಾದ ವ್ಯಕ್ತಿ ಇಂದು ಆಸ್ಪತ್ರೆಯಿಂದ ಬಿಡುಗಡೆ

By

Published : May 26, 2020, 9:18 AM IST

ಹಾವೇರಿ: ಕೋವಿಡ್ ಆಸ್ಪತ್ರೆಯಿಂದ ಇಂದು ಮತ್ತೊಬ್ಬ ಬಿಡುಗಡೆಯಾಗಲಿದ್ದಾನೆ. ಮುಂಬೈಯಿಂದ ಜಿಲ್ಲೆಗೆ ಮೊದಲ ಕೊರೊನಾ ಹೊತ್ತು ತಂದ ವ್ಯಕ್ತಿ ಮಂಗಳವಾರ ಬಿಡುಗಡೆಯಾಗಲಿದ್ದಾನೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಂದ್ರ ದೊಡ್ಮನಿ ತಿಳಿಸಿದ್ದಾರೆ.

ಪಿ-639 ಬಗ್ಗೆ ಈಗಾಗಲೇ ವೈದ್ಯಕೀಯವಾಗಿ ಅಧ್ಯಯನ ಮಾಡಲಾಗಿದೆ. ಅಲ್ಲದೆ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿದ್ದು, ಆಸ್ಪತ್ರೆಯಿಂದ ಇಂದು ಬಿಡುಗಡೆ ಮಾಡಲಾಗುತ್ತಿದೆ ಎಂದು ಡಾ. ರಾಜೇಂದ್ರ ತಿಳಿಸಿದರು.

ಕೊರೊನಾದಿಂದ ವ್ಯಕ್ತಿ ಗುಣಮುಖ

ಅಲ್ಲದೆ ಬಿಡುಗಡೆಯಾದ ನಂತರ 14 ದಿನಗಳ ಕಾಲ ಮನೆಯಲ್ಲಿ ಕ್ವಾರಂಟೈನ್‌ನಲ್ಲಿ ಇರುವಂತೆ ತಿಳಿಸಲಾಗುತ್ತಿದೆ. ಹಾವೇರಿ ಕೋವಿಡ್ ಆಸ್ಪತ್ರೆ ಸಿಬ್ಬಂದಿ ಸಹಕಾರದಿಂದ ಕೊರೊನಾ ಪಾಸಿಟಿವ್ ರೋಗಿಗಳು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಡಾ. ರಾಜೇಂದ್ರ ತಿಳಿಸಿದರು.

ABOUT THE AUTHOR

...view details