ಹಾವೇರಿ :ಮೆಣಸಿನಕಾಯಿ ಮಾರುಕಟ್ಟೆಗೆ ವಿಶ್ವ ಪ್ರಸಿದ್ಧಿಯಾಗಿರುವ ಜಿಲ್ಲೆಯ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮತ್ತೊಂದು ದಾಖಲೆಗೆ ಸಾಕ್ಷಿಯಾಗಿದೆ.
ಅತೀ ಹೆಚ್ಚಿನ ಬೆಲೆಗೆ ಮಾರಾಟವಾದ ಮೆಣಸಿನಕಾಯಿ... ಅನ್ನದಾತ ಬೆಳೆದ ಬೆಳೆಗೆ ಬೆಲೆ ಎಷ್ಟು ಗೊತ್ತಾ? - Red chili selling 33 thousand rupees
ಗದಗ ತಾಲೂಕಿನ ಕುರ್ತಕೋಟಿ ಗ್ರಾಮದ ರೈತನೋರ್ವ ಬೆಳೆದಿರುವ ಮೆಣಸಿನಕಾಯಿ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಕ್ವಿಂಟಲ್ಗೆ ಬರೋಬ್ಬರಿ 33,333 ಸಾವಿರ ರೂಪಾಯಿ ದಾಖಲೆಯ ಹಣದಲ್ಲಿ ಮಾರಾಟವಾಗಿದೆ.
![ಅತೀ ಹೆಚ್ಚಿನ ಬೆಲೆಗೆ ಮಾರಾಟವಾದ ಮೆಣಸಿನಕಾಯಿ... ಅನ್ನದಾತ ಬೆಳೆದ ಬೆಳೆಗೆ ಬೆಲೆ ಎಷ್ಟು ಗೊತ್ತಾ? Red chili selling 33 thousand rupees](https://etvbharatimages.akamaized.net/etvbharat/prod-images/768-512-5700299-thumbnail-3x2-gada.jpg)
ಅತೀ ಹೆಚ್ಚಿನ ಬೆಲೆಗೆ ಮಾರಾಟವಾದ ಮೆಣಸಿನಕಾಯಿ
ಅತೀ ಹೆಚ್ಚಿನ ಬೆಲೆಗೆ ಮಾರಾಟವಾದ ಮೆಣಸಿನಕಾಯಿ
ಗದಗ ತಾಲೂಕಿನ ಕುರ್ತಕೋಟಿ ಗ್ರಾಮದ ಮಂಜುನಾಥ ಗಾಡ ರೆಡ್ಡಿ ಎಂಬ ರೈತ ಬೆಳೆದಿರುವ ಮೆಣಸಿನಕಾಯಿ ಕ್ವಿಂಟಲ್ಗೆ 33,333 ರೂಪಾಯಿ ದಾಖಲೆಯ ಮಾರಾಟವಾಗಿದೆ. ಇವರು ಇಂದು ಮಾರುಕಟ್ಟೆಗೆ ಮೂರು ಕ್ವಿಂಟಲ್ ಮೆಣಸಿನಕಾಯಿ ತಂದಿದ್ದರು. ಈ ಮೆಣಸಿನಕಾಯಿಗೆ ಖರೀದಿದಾರರು 33,333 ರೂಪಾಯಿ ಬೆಲೆ ನಿಗಧಿ ಮಾಡುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ಮಾರುಕಟ್ಟೆಯಲ್ಲಿ ಅತ್ಯಧಿಕ ಬೆಲೆಗೆ ಮಾರಾಟವಾದ ಮೆಣಸಿನಕಾಯಿ ಎಂಬ ಖ್ಯಾತಿ ಮಂಜುನಾಥ್ ಗಾಡರೆಡ್ಡಿಯ ರೈತನದ್ದಾಯಿತು. ತಾನು ಬೆಳೆದಮೆಣಸಿನಕಾಯಿಗೆ ವಿಶೇಷ ಬೆಲೆ ಸಿಕ್ಕಿದ್ದಕ್ಕೆ ರೈತ ಸಂತಸ ವ್ಯಕ್ತಪಡಿಸಿದ್ದಾರೆ.
TAGGED:
Haveri Market latest news