ಕರ್ನಾಟಕ

karnataka

ETV Bharat / state

ಶಾಸಕ ಸ್ಥಾನ ಉಳಿವಿಗಾಗಿ ದೇವರ ಮೊರೆ ಹೋದ ಅನರ್ಹ ಶಾಸಕ ಆರ್ ಶಂಕರ್​! - Rebel MLA R Shankar temple visit latest news

ಅನರ್ಹ ಶಾಸಕ ಆರ್ ಶಂಕರ್​ ತಮ್ಮ ಶಾಸಕ ಸ್ಥಾನದ ಉಳಿವಿಗಾಗಿ ಟೆಂಪಲ್ ರನ್ ಶುರು ಮಾಡಿದ್ದಾರೆ. ಇಂದು ಬೆಳಗ್ಗೆ ತಮ್ಮ ಆರಾಧ್ಯ ದೈವ ಶ್ರೀ ಬೀರಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಅನರ್ಹ ಶಾಸಕ ಆರ್ ಶಂಕರ್​ ಟೆಂಪಲ್ ರನ್

By

Published : Oct 20, 2019, 2:04 PM IST

ಹಾವೇರಿ: ರಾಣೆಬೆನ್ನೂರು ಕ್ಷೇತ್ರದ ಅನರ್ಹ ಶಾಸಕ ಆರ್. ಶಂಕರ್​ ಇಂದು ಬೆಳಗ್ಗೆ ಟೆಂಪಲ್ ರನ್ ಶುರು ಮಾಡಿದ್ದಾರೆ.

ಶಾಸಕ ಸ್ಥಾನದಿಂದ ಅನರ್ಹಗೊಂಡ ಹಿನ್ನೆಲೆಯಲ್ಲಿ ಪ್ರಕರಣ ಈಗಾಗಲೇ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಅ. 22 ರಂದು ಸುಪ್ರೀಂಕೋರ್ಟ್ ತೀರ್ಪು ಹೊರ ಬೀಳುವುದು ಭಾಗಶಃ ಖಚಿತವಾಗಿದೆ.

ಇದರ ಬೆನ್ನಲ್ಲೇ ಅನರ್ಹ ಶಾಸಕ ಆರ್. ಶಂಕರ್​ ತಮ್ಮ ಶಾಸಕ ಸ್ಥಾನದ ಉಳಿವಿಗಾಗಿ ಟೆಂಪಲ್ ರನ್ ಶುರು ಮಾಡಿದ್ದಾರೆ. ಬೆಳಗ್ಗೆ ತಮ್ಮ ಆರಾಧ್ಯ ದೈವ ಶ್ರೀ ಬೀರಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರಲ್ಲಿ ಬೇಡಿಕೊಂಡರು.

ಅನರ್ಹ ಶಾಸಕ ಆರ್ ಶಂಕರ್​ ಟೆಂಪಲ್ ರನ್

ಬಳಿಕ ಮಾತನಾಡಿದ ಅವರು, ನಾಳೆ ಬೆಳಗ್ಗೆ ದೆಹಲಿಗೆ ಹೋಗಲಿದ್ದೇನೆ. ಮಂಗಳವಾರ ಸುಪ್ರೀಂಕೋರ್ಟ್ ಅನರ್ಹತೆ ಬಗ್ಗೆ ವಿಚಾರಣೆ ಕೈಗೆತ್ತಿಕೊಳ್ಳಲಿದೆ. ಅನರ್ಹತೆ ಬಗ್ಗೆ ವಿಚಾರಣೆ ನಡೆಯಲಿದ್ದು, ಸುಪ್ರೀಂಕೋರ್ಟ್ ಈ ಪ್ರಕರಣವನ್ನು ಇನ್ನೂ ಮುಂದೂಡುವ ಸಾಧ್ಯತೆಯೂ ಇದೆ ಎಂದರು.

ABOUT THE AUTHOR

...view details