ಕರ್ನಾಟಕ

karnataka

ETV Bharat / state

ಆರ್‌ಸಿಇಪಿ ಒಪ್ಪಂದ ಬಿಜೆಪಿ ಸರ್ಕಾರದ್ದಲ್ಲ: ಸಿ.ಟಿ.ರವಿ ವಾಗ್ದಾಳಿ - ಸಿ.ಟಿ.ರವಿ ವಾಗ್ದಾಳಿ

ಆರ್‌ಸಿಇಪಿ ಒಪ್ಪಂದ ಬಿಜೆಪಿ ಸರ್ಕಾರದ್ದಲ್ಲ. ಅದನ್ನ ಈ ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರವೇ ಮಾಡಿದ್ದು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಆರ್‌ಸಿಇಪಿ ಒಪ್ಪಂದ ಬಿಜೆಪಿ ಸರ್ಕಾರದ್ದಲ್ಲ: ಸಿ.ಟಿ.ರವಿ ವಾಗ್ದಾಳಿ

By

Published : Nov 4, 2019, 2:14 PM IST

ಹಾವೇರಿ: ಆರ್‌ಸಿಇಪಿ ಒಪ್ಪಂದ ಬಿಜೆಪಿ ಸರ್ಕಾರದ್ದಲ್ಲ. ಅದನ್ನ ಈ ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರವೇ ಮಾಡಿದ್ದು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಆರ್‌ಸಿಇಪಿ ಒಪ್ಪಂದ ಬಿಜೆಪಿ ಸರ್ಕಾರದ್ದಲ್ಲ: ಸಿ.ಟಿ.ರವಿ ವಾಗ್ದಾಳಿ

ಹಾವೇರಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ದೇಶ ಹಿತ ಕಾಪಾಡುತ್ತಿದ್ದಾರೆ. ಒಪ್ಪಂದದಲ್ಲಿ ರಾಷ್ಟ್ರದ ಸಣ್ಣ ಹೈನುಗಾರಿಕೆದಾರರ ಹಿತ ಕಾಪಾಡಲಾಗುತ್ತದೆ. ಕಾಂಗ್ರೆಸ್‌ನವರು ಈ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದೀಗ ಬಿಜೆಪಿಯವರ ಮೇಲೆ ಬೊಟ್ಟು ತೋರಿಸುತ್ತಿದ್ದಾರೆ. ಬಿಜೆಪಿ ಸರ್ಕಾರ ಯಾವಾಗಲು ರಾಷ್ಟ್ರದ ಹಿತ ಕಾಪಾಡುತ್ತದೆ. ಕಾಂಗ್ರೆಸ್ಸಿನ ರೀತಿ ಅಲ್ಲಾ ಎಂದು ವಾಗ್ದಾಳಿ ನಡೆಸಿದರು. ಇದೇ ವೇಳೆ ಟಿಪ್ಪು ಸಮರ್ಥನೆ ಮಾಡಿಕೊಳ್ಳುತ್ತಿರುವ ಸಿದ್ದರಾಮಯ್ಯ ಕನ್ನಡದವರಾ? ಪರ್ಷಿಯನ್ ಭಾಷೆಯವರಾ? ಎಂದು ಪ್ರಶ್ನಿಸಿದ್ದಾರೆ. ಟಿಪ್ಪು ಮೊದಲ 11 ವರ್ಷಗಳ ಆಡಳಿತದಲ್ಲಿ ಕ್ರೌರ್ಯತೆ ಇತ್ತು. ನಂತರ ಕನ್ನಡಿಗರು ವಿರೋಧಿಸಿದ ನಂತರ ಹಿಂದುಗಳ ದೇವಸ್ಥಾನಕ್ಕೆ ದತ್ತಿ ನೀಡಿದ್ದಾನೆ. ಅವನ ಒಂದು ಮುಖ ಕ್ರೌರ್ಯತೆ ಇದ್ದರೆ ಇನ್ನೊಂದು ಮುಖ ಬೇರೆಯದ್ದೆ ಇತ್ತು. ಆ ಎರಡು ಮುಖಗಳ ಕುರಿತಂತೆ ಇತಿಹಾಸ ತಿಳಿಸುವುದು ಮುಖ್ಯ. ಟಿಪ್ಪು ಪಠ್ಯ ಬೇಕು ಬೇಡ ಎಂಬುವದರ ಬಗ್ಗೆ ಚರ್ಚೆಯಾಗಲಿ. ಅದರಲ್ಲಿ ನನ್ನ ತಪ್ಪಿದ್ದರೆ ನಾನು ಕ್ಷಮೆಯಾಚಿಸುತ್ತೇನೆ ಎಂದರು.

ಸಂವಿಧಾನದಲ್ಲಿ ರಾಷ್ಟ್ರಕ್ಕೆ ಒಂದೇ ಧ್ವಜ ಇರುವ ಉಲ್ಲೇಖವಿದೆ ಎಂದಿದ್ದೇನೆ ಹೊರತು ನಾಡ ಧ್ವಜಕ್ಕೆ ವಿರೋಧಿಸಿಲ್ಲ ಎಂದು ಸ್ಪಷ್ಟಪಡಿಸಿದರು. ಸರ್ಕಾರ ಬೀಳಿಸುವುದರಲ್ಲಿ ಯಡಿಯೂರಪ್ಪ ಮತ್ತು ಅಮಿತ್​​ ಶಾ ಪಾತ್ರವಿದೆ ಎಂದು ಕಾಂಗ್ರೆಸ್ ಆರೋಪಿಸುತ್ತದೆ. ಯಡಿಯೂರಪ್ಪ ನಮ್ಮ ಪಕ್ಷದ ಸರ್ವಾನುಮತ ರಾಜ್ಯ ನಾಯಕರು. ಆದರೆ ಸಿದ್ದರಾಮಯ್ಯ ಅವರು ಪಕ್ಷದ ಮುಖಂಡರ ವಿರೋಧದ ನಡುವೆ ಪ್ರತಿಪಕ್ಷದ ನಾಯಕರಾಗಿದ್ದಾರೆ ಎಂದು ಲೇವಡಿ ಮಾಡಿದರು.

ABOUT THE AUTHOR

...view details