ರಾಣೆಬೆನ್ನೂರು: ನಿನ್ನೆ ಕೋವಿಡ್ ಕೇರ್ ಸೆಂಟರ್‌ನಿಂದ ಪರಾರಿಯಾಗಿದ್ದ ಅತ್ಯಾಚಾರ ಆರೋಪಿ ಇಂದು ಮತ್ತೆ ಪತ್ತೆಯಾಗಿದ್ದಾನೆ.
ತಾಲ್ಲೂಕಿನ ಹೂಲಿಹಳ್ಳಿಯ ಮಾಲತೇಶ ಗಿಡ್ಡಪ್ಪ ಕುಮ್ಮೂರು ಎಂಬ ಸೋಂಕಿತ ವ್ಯಕ್ತಿ ನಗರದ ಎಸ್‌ಆರ್‌ಕೆ ನಗರದಲ್ಲಿರುವ ಕೋವಿಡ್ ಕೇರ್ ಸೆಂಟರ್‌ನಿಂದ ಯಾರಿಗೂ ತಿಳಿಸದೆ ಪರಾರಿಯಾಗಿದ್ದಾನೆ. ಕೋವಿಡ್ ನಿಯಮ ಉಲ್ಲಂಘಿಸಿ ಪರಾರಿಯಾಗಿದ್ದರ ಈ ಬಗ್ಗೆ ಕೋವಿಡ್ ಕೇರ್ ಸೆಂಟರ್‌ನ ವೈದ್ಯಕೀಯ ಸಿಬ್ಬಂದಿ ನಿರಂಜನ ರುದ್ರಮುನಿಯಲಿ ಅವರು ಮಂಗಳವಾರ ಗ್ರಾಮೀಣ ಠಾಣೆಗೆ ದೂರು ಸಲ್ಲಿಸಿದ್ದರು.
ಈ ಬಗ್ಗೆ ಗ್ರಾಮೀಣ ಠಾಣೆ ಪೊಲೀಸರು ಆತನ ಸಂಬಂಧಿಕರನ್ನು ವಿಚಾರಣೆ ನಡೆಸಿದಾಗ ಬ್ಯಾಡಗಿ ತಾಲ್ಲೂಕಿನ ಚಿಕ್ಕಬಾಸೂರಿನಲ್ಲಿ ಬುಧವಾರ ಆರೋಪಿ ಪತ್ತೆಯಾಗಿದ್ದಾನೆ. ತಮ್ಮ ಅಕ್ಕ ಮತ್ತು ಭಾವನನ್ನು ನೋಡುವಂತಾಗಿದ್ದಕ್ಕೆ ಅಕ್ಕನ ಮನೆಗೆ ಬಂದಿದ್ದೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ ಎಂದು ಪಿಎಸ್‌ಐ ವಸಂತ ಎಚ್.ಸಿ ತಿಳಿಸಿದ್ದಾರೆ.
ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸೆಗಿದ್ದ ಪಾಪಿ:ಕಳೆದ ಹತ್ತು ದಿನಗಳ ಹಿಂದೆ ಹೂಲಿಹಳ್ಳಿ ಗ್ರಾಮದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸೆಗಿದ್ದ ಆರೋಪಿಯನ್ನು ಪೋಲಿಸರು ಬಂಧಿಸಿದ್ದರು. ನಂತರ ವೈದ್ಯಕೀಯ ತಪಾಸಣೆ ನಡೆಸಿದಾಗ ಕೊರೊನಾ ದೃಢಪಟ್ಟಿತ್ತು. ಈ ಹಿನ್ನೆಲೆ ಆರೋಪಿಯನ್ನು ನಗರದ ಹೊರವಲಯದ ವಸತಿ ನಿಲಯದ ಕೇಂದ್ರದಲ್ಲಿ ಕ್ವಾರೈಂಟನ್ ಮಾಡಿ, ಚಿಕಿತ್ಸೆ ನೀಡಲಾಗುತ್ತಿತ್ತು ಎನ್ನಲಾಗಿದೆ.