ರಾಣೆಬೆನ್ನೂರು(ಹಾವೇರಿ): ಮಳೆ ಬಿದ್ದಿದ್ದ ಹಿನ್ನೆಲೆ ಕಳೆದ ಹದಿನೈದು ದಿನಗಳ ಹಿಂದೆ ಮೆಕ್ಕೆಜೋಳ ಬಿತ್ತನೆ ಮಾಡಲಾಗಿತ್ತು. ಆದರೆ, ಸದ್ಯ ಬೆಳೆ ಮೊಳೆಕೆಯೊಡೆದಿದ್ದು, ಮಳೆಯಿಲ್ಲದೇ ಬತ್ತಿಹೋಗುತ್ತಿವೆ.
ಹೌದು, ರಾಣೆಬೆನ್ನೂರು ತಾಲೂಕಿನ ಮೇಡ್ಲೇರಿ ಹೋಬಳಿಯಲ್ಲಿ ರೈತರು ಮೇ ತಿಂಗಳಲ್ಲಿ ಸುರಿದ ಮಳೆಯ ಹದಕ್ಕೆ ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಬಿತ್ತನೆ ಬೀಜ, ಗೊಬ್ಬರ ಸೇರಿದಂತೆ ಎಕರೆಗೆ ಸುಮಾರು 15 ರಿಂದ 20 ಸಾವಿರ ಖರ್ಚು ಮಾಡಿದ್ದಾರೆ. ಈಗಾಗಲೇ ಮೆಕ್ಕೆಜೋಳ ಮೊಳಕೆಯೊಡದು ಸಸ್ಯವಾಗಿದೆ. ಆದರೆ, ಮುಂಗಾರು ಕೈ ಕೊಟ್ಟಿದ್ದು ಮೆಕ್ಕೆಜೋಳ ಬೆಳೆ ಒಣಗುತ್ತಿದೆ.