ಹಾವೇರಿ:ಏಲಕ್ಕಿ ಕಂಪಿನ ನಗರ ಹಾವೇರಿರಂಗಪಂಚಮಿಗೆ ಸನ್ನದ್ಧಗೊಳ್ಳುತ್ತಿದೆ.ಎಲ್ಲೆಲ್ಲೂ ಬಣ್ಣಗಳಿಂದ ನಳನಳಿಸುತ್ತಿದೆ. ಮಾರ್ಚ್ 19ರ ರಂಗಪಂಚಮಿಯ ಹೋಳಿ ಆಚರಣೆಗೆ ನಗರದ 21ಕಡೆ ಕಾಮರತಿಯ ಕಟ್ಟೆಗೆ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.
ಅಕ್ಕಿಪೇಟೆ ಮಾರುಕಟ್ಟೆ, ಗದ್ದಿಗೇರ್ ಓಣಿ, ಯಾಲಕ್ಕಿ ಓಣಿ, ಪುರದ ಓಣಿ ಮತ್ತು ಮೇಲಿನ ಪೇಟೆ ಸೇರಿದಂತೆ ವಿವಿಧೆಡೆ ಈಗಾಗಲೇ ರತಿಮನ್ಮಥರ ಕಟ್ಟಿಗೆ ಮೂರ್ತಿಗಳನ್ನು ಸ್ಥಾಪಿಸಿ ಪೆಂಡಾಲಗಳನ್ನು ಹಾಕಲಾಗಿದೆ.
ದಿನಕ್ಕೆ ಎರಡು ಬಾರಿ ಕಾಮರತಿಗೆ ಪೂಜೆ ಸಲ್ಲಿಸಲಾಗುತ್ತಿದ್ದು. ರತಿಮನ್ಮಥರ ಮೂರ್ತಿಗಳು ಒಂದಕ್ಕಿಂತ ಒಂದು ವಿಭಿನ್ನವಾಗಿ ಪ್ರತಿಷ್ಠಾಪಿಸಲ್ಪಟ್ಟಿವೆ. ಕಾಮಣ್ಣನ ಪೇಟಾ, ಟೋಪಿಗಳು ಗಮನ ಸೆಳೆಯುತ್ತಿವೆ.