ರಾಣೆಬೆನ್ನೂರು(ಹಾವೇರಿ):ಕಳೆದ ಕೆಲ ದಿನಗಳ ಹಿಂದೆ ಸುರಿದ ಮಳೆಗೆ ರಾಣೆಬೆನ್ನೂರು ನಗರ ಅಕ್ಷರಶಃ ತುಂಬಿಹೋಗಿ, ಜನಜೀವನ ಅಸ್ತವ್ಯಸ್ಥಗೊಂಡಿತ್ತು. ಸದ್ಯ ರಾಜಕಾಲುವೆ ಮೂಲಕ ಹರಿಯಬೇಕಾದ ಮಳೆ ನೀರು ರಸ್ತೆಯ ಮೇಲೆ ಹರಿದು ಅವಾಂತರ ಸೃಷ್ಟಿಸಿದೆ.
ರಾಣೆಬೆನ್ನೂರಲ್ಲಿ ವರುಣನ ಅವಾಂತರ... ರಸ್ತೆ ದಾಟಲು ವಾಹನ ಚಾಲಕರ ಸರ್ಕಸ್ - ಹಾವೇರಿ ಪ್ರವಾಹ ಸುದ್ದಿ
ಮೇಡ್ಲೇರಿ-ರಾಣೆಬೆನ್ನೂರು ನಗರವನ್ನು ಸಂಪರ್ಕಿಸುವ ರಸ್ತೆ ಮಧ್ಯೆ ದೊಡ್ಡ ರಾಜಕಾಲುವೆ ಹಾದುಹೋಗಿದೆ. ಈ ನಡುವೆ ರಾಜಕಾಲುವೆ ಒತ್ತುವರಿಯಾದ ಕಾರಣ ನೀರು ರಸ್ತೆಯ ಮೇಲೆ ರಭಸದಿಂದ ಹರಿದು ಸಂಪೂರ್ಣ ಡಾಂಬರ್ ಹಾಳಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.
ದಿನನಿತ್ಯ ಸಾವಿರಾರು ವಾಹನ ಸವಾರರು ಸಂಚಾರ ಮಾಡುವ ಮೇಡ್ಲೇರಿ-ರಾಣೆಬೆನ್ನೂರು ನಗರವನ್ನು ಸಂಪರ್ಕಿಸುವ ರಸ್ತೆಯ ಮಧ್ಯೆ ದೊಡ್ಡ ರಾಜಕಾಲುವೆ ಹಾದುಹೋಗಿದೆ. ಈ ನಡುವೆ ರಾಜಕಾಲುವೆ ಒತ್ತುವರಿಯಾದ ಕಾರಣ ನೀರು ರಸ್ತೆಯ ಮೇಲೆ ರಭಸದಿಂದ ಹರಿದು ಸಂಪೂರ್ಣ ಡಾಂಬರು ಹಾಳಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.
ಇನ್ನು, ವಿಕಾಸ ನಗರ, ಗೌರಿಶಂಕರ ನಗರ, ರಾಜರಾಜೇಶ್ವರಿ ನಗರ, ಬಿರೇಶ್ವರ ನಗರದ ಪ್ರಮುಖ ರಸ್ತೆಗಳು ಕೂಡ ಮಳೆಗೆ ಕಿತ್ತು ಹೋಗಿವೆ. ಪ್ರತಿನಿತ್ಯ ವಾಹನ ಸವಾರರು ಹಾಳಾದ ರಸ್ತೆಗಳ ಮೇಲೆ ನಿತ್ಯ ಸರ್ಕಸ್ ಮಾಡುವಂತಾಗಿದೆ. ಕೆಲವರು ಆಯತಪ್ಪಿ ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ನಗರಸಭೆ ಅಥವಾ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ರಸ್ತೆಯನ್ನು ಸರಿ ಮಾಡಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.