ರಾಣೆಬೆನ್ನೂರು:ಛತ್ರಪತಿ ಶಿವಾಜಿ ಮಹಾರಾಜರನ್ನು ಹೋಲುವಂತೆ ಇಪ್ಪತ್ತೊಂದು ಅಡಿ ಎತ್ತರದಲ್ಲಿ ರೂಪಿತಗೊಂಡ ರಾಣೆಬೆನ್ನೂರು ನಗರದ ಗಣೇಶ ಮೂರ್ತಿ ಎಲ್ಲರ ಆಕರ್ಷಣೆಗೆ ಕಾರಣವಾಗಿದೆ.
ನಗರಸಭಾ ಮೈದಾನದಲ್ಲಿ ಸ್ಥಳೀಯ ವಂದೇ ಮಾತರಂ ಸ್ವಯಂ ಸೇವಾ ಸಂಘ 11ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಈ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು, ಗಣೇಶ ಮೂರ್ತಿ ಹಾಗೂ ಕೋಟೆಯ ಥರದ ವೇದಿಕೆಗೆ ಸುಮಾರು ಮೂವತ್ತು ಲಕ್ಷ ಖರ್ಚು ಮಾಡಲಾಗಿದೆ. ಮಹಾರಾಷ್ಟ್ರ ರಾಜ್ಯದ ರಾಯಗಡ ಕೋಟೆ ಮಾದರಿಯಲ್ಲಿ ನಿರ್ಮಾಣವಾಗಿರುವ ವೇದಿಕೆ ಜನರನ್ನು ಆಕರ್ಷಿಸುತ್ತಿದ್ದು, ಶಿವಾಜಿ ಮಹಾರಾಜರ ಆಳ್ವಿಕೆಯನ್ನು ಬಿಂಬಿಸುತ್ತಿದೆ. ಕೋಟೆಯ ಜತೆಗೆ ಸೈನಿಕರು, ಅಶ್ವದಳ, ಗಜದಳ ನೋಡುಗರಿಗೆ ಇತಿಹಾಸ ನೆನಪು ತಂದುಕೊಡುತ್ತಿದೆ.