ರಾಣೆಬೆನ್ನೂರು: ಬೈಕ್ನಿಂದ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಬೆಲೂರು ಗ್ರಾಮದ ಬಳಿ ನಡೆದಿದೆ.
ಬೈಕ್ ಮೇಲಿಂದ ಬಿದ್ದು ಸವಾರ ಸ್ಥಳದಲ್ಲೇ ಸಾವು - Road accident news
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಬೆಲೂರು ಗ್ರಾಮದ ಬಳಿ ಬೈಕ್ನಿಂದ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾನೆ.
![ಬೈಕ್ ಮೇಲಿಂದ ಬಿದ್ದು ಸವಾರ ಸ್ಥಳದಲ್ಲೇ ಸಾವು Died](https://etvbharatimages.akamaized.net/etvbharat/prod-images/768-512-12:59:48:1593242988-kn-rnr-02-bike-accident-kac10001-27062020125814-2706f-1593242894-127.jpg)
Died
ಉದಗಟ್ಟಿ ಗ್ರಾಮದ ಫಕ್ಕಿರಪ್ಪ ಬಸಪ್ಪ ಕಾಳೇರ (40) ಮೃತಪಟ್ಟ ವ್ಯಕ್ತಿ. ಫಕ್ಕಿರಪ್ಪ ಉದಗಟ್ಟಿ ಗ್ರಾಮದಿಂದ ಬೆಲೂರ ಗ್ರಾಮಕ್ಕೆ ರಾತ್ರಿ ವೇಳೆ ಬೈಕ್ನಲ್ಲಿ ಹೋಗುತ್ತಿದ್ದಾಗ ಆಯ ತಪ್ಪಿ ಗದ್ದೆಯಲ್ಲಿ ಬಿದ್ದಿದ್ದಾರೆ. ರಾತ್ರಿ ವೇಳೆ ಯಾರೂ ನೋಡದ ಹಿನ್ನೆಲೆ ತೀವ್ರ ರಕ್ತಸ್ರಾವವಾದ ಕಾರಣ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮುಂಜಾನೆ ಗ್ರಾಮದ ಜನರು ವಾಕಿಂಗ್ ಹೋದ ವೇಳೆ ಅಪಘಾತವಾಗಿರುವುದು ಕಂಡು ಬಂದಿದೆ. ಈ ಕುರಿತು ರಾಣೆಬೆನ್ನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.