ರಾಣೆಬೆನ್ನೂರು (ಹಾವೇರಿ): ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸೆಗಿದ ಆರೋಪಿಗೆ ಕೊರೊನಾ ಸೋಂಕು ತಗುಲಿದೆ. ತಾಲೂಕಿನ ಹಳೆಹೂಲಿಹಳ್ಳಿ ಗ್ರಾಮದ ಮಾಲತೇಶ ಕುಮ್ಮೂರು(26) ಎಂಬ ಆರೋಪಿಗೆ ಇಂದು ವೈದ್ಯಕೀಯ ತಪಾಸಣೆ ನಡೆಸಿದ್ದು, ವರದಿಯಲ್ಲಿ ಕೊರೊನಾ ದೃಢವಾಗಿದೆ.
ರಾಣೆಬೆನ್ನೂರು: ಅತ್ಯಾಚಾರ ಆರೋಪಿಗೆ ಕೊರೊನಾ ದೃಢ - Corona Latest News
ತಾಲೂಕಿನ ಹಳೆಹೂಲಿಹಳ್ಳಿಯಲ್ಲಿ ಅತ್ಯಾಚಾರ ಆರೋಪದಡಿ ಬಂಧನವಾಗಿದ್ದ ಆರೋಪಿಗೆ ಕೊರೊನಾ ದೃಢವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಣೆಬೆನ್ನೂರು: ಅತ್ಯಾಚಾರ ಆರೋಪಿಗೆ ಕೊರೊನಾ ದೃಢ
ನಿನ್ನೆ ಗ್ರಾಮದಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿರುವ ಆರೋಪದಡಿ ಈತನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಆರೋಗ್ಯ ತಪಾಸಣೆ ನಡೆಸಿದಾಗ ಕೊರೊನಾ ಇರುವುದು ದೃಢವಾಗಿದೆ. ಸದ್ಯ ಆರೋಪಿಗೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.