ರಾಣೆಬೆನ್ನೂರು: ನಗರಸಭೆ ಅಧಿಕಾರಕ್ಕಾಗಿ ಬಿಜೆಪಿ-ಕೆಪಿಜೆಪಿ ಸದಸ್ಯರ ಒಗ್ಗಟ್ಟಿನ ನಡುವೆ ಅಧಿಕಾರ ಪಡೆದಿದೆ. ಆದರೆ, ಕೆಪಿಜೆಪಿ ಸದಸ್ಯರೊಬ್ಬರು ಸಿಎಂ ಯಡಿಯೂರಪ್ಪರನ್ನ ಭೇಟಿ ಮಾಡಿಸಿದರೂ ಕೂಡ ಕಾಂಗ್ರೆಸ್ಗೆ ಬೆಂಬಲ ನೀಡಿದ್ದಾರೆ.
ರಾಣೆಬೆನ್ನೂರು: ಸಿಎಂ ಮನವಿ ಮಾಡಿದರೂ 'ಕಮಲ' ಬಿಟ್ಟು 'ಕೈ' ಹಿಡಿದ ನಗರಸಭೆ ಸದಸ್ಯ - Municipality Authority bjp rule news
ರಾಣೆಬೆನ್ನೂರು ನಗರಸಭೆಯ 34ನೇ ವಾರ್ಡ್ ಕೆಪಿಜೆಪಿ ಸದಸ್ಯ ನಿಂಗರಾಜ ಕೋಡಿಹಳ್ಳಿ, ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿ ಅಚ್ಚರಿ ಮೂಡಿಸಿದರು. ಇದರಿಂದ ಕೇವಲ 9 ಸದಸ್ಯರು ಹೊಂದಿದ್ದ ಕಾಂಗ್ರೆಸ್ ಪಕ್ಷಕ್ಕೆ 10 ಸದಸ್ಯರ ಬೆಂಬಲ ಸಿಕ್ಕಂತಾಯಿತು.
ರಾಣೆಬೆನ್ನೂರು ನಗರಸಭೆಯ 34ನೇ ವಾರ್ಡ್ ಕೆಪಿಜೆಪಿ ಸದಸ್ಯ ನಿಂಗರಾಜ ಕೋಡಿಹಳ್ಳಿ, ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿ ಅಚ್ಚರಿ ಮೂಡಿಸಿದರು. ವಿಧಾನ ಪರಿಷತ್ ಸದಸ್ಯ ಆರ್.ಶಂಕರ್, ಕೆಪಿಜೆಪಿಯ ಎಲ್ಲಾ 10 ಸದಸ್ಯರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದರು. ಈ ನಡುವೆ ಬಿಜೆಪಿ ಸೇರಿರುವ ಆರ್.ಶಂಕರ್ ನಿನ್ನೆ ಸಿಎಂ ಬಿ.ಎಸ್.ಯಡಿಯೂರಪ್ಪ ನವರಿಗೆ ಕೆಪಿಜೆಪಿಯ ಎಲ್ಲಾ ಸದಸ್ಯರನ್ನು ಭೇಟಿ ಮಾಡಿಸಿದ್ದರು. ಅಲ್ಲದೇ ಸಿಎಂ ಕೂಡ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.
ಆದರೆ, ಕೆಪಿಜೆಪಿ ಸದಸ್ಯ ಕೋಡಿಹಳ್ಳಿಯವರು 9 ಜನ ಹೊರತುಪಡಿಸಿ ತಾವೊಬ್ಬರು ಮಾತ್ರ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಿದ್ದಾರೆ. ಇದರಿಂದ ಕೇವಲ 9 ಸದಸ್ಯರು ಹೊಂದಿದ್ದ ಕಾಂಗ್ರೆಸ್ ಪಕ್ಷಕ್ಕೆ 10 ಸದಸ್ಯರ ಬೆಂಬಲ ಸಿಕ್ಕಂತಾಯಿತು. ಆದರೆ, ಬಿಜೆಪಿ-ಕೆಪಿಜೆಪಿ ಮೈತ್ರಿಯಿಂದ ನಗರಸಭೆ ಗದ್ದುಗೆ ಬಿಜೆಪಿ ಪಾಲಾಗಿದೆ.