ರಾಣೇಬೆನ್ನೂರು :ತಾಲೂಕಿನ ಇಟಗಿ ಮತ್ತು ಕುಪ್ಪೆಲೂರ ಗ್ರಾಮದಲ್ಲಿ ಕೊರೊನಾ ಮುಂಜಾಗ್ರತೆಯ ಸಲುವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಂದ್ ಮಾಡಲಾಗಿತ್ತು. ಚಿಕಿತ್ಸೆಗಾಗಿ ಪರದಾಡಿದ ರೋಗಿಗಳು ಆರೋಗ್ಯ ಕೇಂದ್ರ ಮುಂದೆ ಪ್ರತಿಭಟನೆ ನಡೆಸಿದ್ದರು.
ಘಟನೆ ಸಂಬಂಧ ಈಟಿವಿ ಭಾರತ ವರದಿ ಪ್ರಸಾರ ಮಾಡಿತ್ತು. ಇದರಿಂದ ಎಚ್ಚೆತ್ತು ತಾಲೂಕು ಆಡಳಿತ ಕೇವಲ ಮೂರು ಗಂಟೆಯಲ್ಲಿ ಆಸ್ಪತ್ರೆ ಒಪನ್ ಮಾಡಿದೆ.