ರಾಣೆಬೆನ್ನೂರು(ಹಾವೇರಿ): ರಾಜ್ಯ ಸೇರಿದಂತೆ ಹೊರ ರಾಜ್ಯದಲ್ಲಿ ನಡೆಯುವಂತಹ ಹೋರಿ ಹಬ್ಬದಲ್ಲಿ "ರಾಣೆಬೆನ್ನೂರು ಹುಲಿ" ಎಂಬ ಹೆಸರಿನ ಹೋರಿ ಅನಾರೋಗ್ಯದಿಂದ ಮೃತಪಟ್ಟಿದೆ.
ನಗರದ ಕುರಬಗೇರಿ ನಿವಾಸಿಯಾದ ದೇವಮರಿಯಪ್ಪ ಗುದಿಗೇರ ಎಂಬುವವರಿಗೆ ಸೇರಿದ "ರಾಣೆಬೆನ್ನೂರು ಹುಲಿ" ಎಂಬ ಹೆಸರಿನ ಮೂಲಕ ರಾಜ್ಯ ಸೇರಿದಂತೆ ಹೊರ ರಾಜ್ಯದಲ್ಲಿ ಹೆಸರು ಮಾಡಿತ್ತು.
ಈ ಹೋರಿ ಸುಮಾರು 17 ವರ್ಷದಿಂದ ವಿವಿಧ ಕಡೆ ನಡೆದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಅಭಿಮಾನಿಗಳನ್ನ ರಂಜಿಸಿತ್ತು. ರಾಜ್ಯದ ಯಾವುದೇ ಮೂಲೆಯಲ್ಲಿ ಹೋರಿ ಹಬ್ಬ ಇದೆ ಎಂದರೆ ಸಾಕು "ರಾಣೆಬೆನ್ನೂರು ಹುಲಿ'' ಅಲ್ಲಿ ಎಂಟ್ರಿ ನೀಡುತಿತ್ತು. ಅಲ್ಲದೇ ಕೆಲವರಿಗೆ ಈ ಹೋರಿ ಸ್ಪರ್ಧೆಗೆ ಇಳಿದರೆ ಸಾಕು ಸಾವಿರಾರು ಅಭಿಮಾನಿಗಳ ಸಾಗರ ಇದರ ಹಿಂದೆ ಇರುತ್ತದೆ. ಇಂತಹ ಒಂದು ಹೋರಿ ಅಕಾಲಿಕ ಸಾವನ್ನಪ್ಪಿದ ಎಂಬ ಸುದ್ದಿ ತಿಳಿದ ಕಾರಣ ಅವರ ಅಭಿಮಾನಿಗಳಿಗೆ ಬಹಳ ನಿರಾಸೆ ಮೂಡಿಸಿದೆ. ರಾಜ್ಯ ಸೇರಿದಂತೆ ಜಿಲ್ಲೆಯ ಕೆಲ ಅಭಿಮಾನಿಗಳು ಹೋರಿ ಅಂತಿಮ ದರ್ಶನ ಪಡೆಯುವ ಮೂಲಕ ತಮ್ಮ ಅಭಿಮಾನತ್ವವನ್ನು ಎತ್ತಿ ಹಿಡಿದಿದೆ.
ಹೋರಿ ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಹೋರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆಯದೇ ವಾಪಸ್ ಬರುತ್ತಿರಲಿಲ್ಲ. ಇದುವರೆಗೂ 25 ಗ್ರಾಂ ಬಂಗಾರ, 17 ಬೈಕ್, 2 ಕೆಜಿ ಬೆಳ್ಳಿ, 6 ಎತ್ತಿನ ಬಂಡಿ ಸೇರಿದಂತೆ ನೂರಾರು ಫ್ರೀಡ್ಜ್, ಗಾಡ್ರೆಜ್, ಸೈಕಲ್ ಬಹುಮಾನ ಪಡೆದಿದೆ.
ಓದಿ : ಕ್ರಿಕೆಟ್ ಚೆಂಡಿಗೆ ಹಣ ಸಿಗದ ಕಾರಣ ಎಲೆಕ್ಟ್ರಿಕ್ ಟವರ್ ಹತ್ತಿದ ಬಾಲಕರು: VIDEO