ಕರ್ನಾಟಕ

karnataka

ETV Bharat / state

ರಾಣೆಬೆನ್ನೂರಲ್ಲಿ ಭಿನ್ನಮತ: ಬಂಡಾಯ ಶಮನಗೊಳಿಸಲು ಬಿಜೆಪಿ ನಾಯಕರ ಹರಸಾಹಸ - ಬಿಜೆಪಿ ನಾಯಕರ ಭೇಟಿ

ರಾಣೆಬೆನ್ನೂರು ಕ್ಷೇತ್ರದಲ್ಲಿ ಬಿಜೆಪಿಯ ಬಂಡಾಯ ಶಮನಗೊಳಿಸಲು ಬಿಜೆಪಿ ನಾಯಕರು ಪರದಾಡುತ್ತಿದ್ದಾರೆ.

ರಾಣೆಬೆನ್ನೂರಲ್ಲಿ ಭಿನ್ನಮತ: ಬಂಡಾಯ ಶಮನಗೊಳಿಸಲು ಬಿಜೆಪಿ ನಾಯಕರ ಹರಸಾಹಸ

By

Published : Nov 19, 2019, 4:41 PM IST

ರಾಣೆಬೆನ್ನೂರು: ಕ್ಷೇತ್ರದ ಉಪ ಚುನಾವಣೆ ಸದ್ದು ಜೋರಾಗಿದ್ದು, ಈಗಾಗಲೇ ಎಲ್ಲಾ ಪಕ್ಷದಿಂದ ನಾಮಪತ್ರ ಸಲ್ಲಿಕೆಯಾಗಿದೆ. ಆದರೆ ರಾಣೆಬೆನ್ನೂರು ಕ್ಷೇತ್ರದಲ್ಲಿ ಬಿಜೆಪಿಯ ಬಂಡಾಯ ಶಮನಗೊಳಿಸಲು ಬಿಜೆಪಿ ನಾಯಕರು ಪರದಾಡುತ್ತಿದ್ದಾರೆ.

ರಾಣೆಬೆನ್ನೂರಲ್ಲಿ ಭಿನ್ನಮತ: ಬಂಡಾಯ ಶಮನಗೊಳಿಸಲು ಬಿಜೆಪಿ ನಾಯಕರ ಹರಸಾಹಸ

2018ರ ವಿಧಾನಸಭಾ ಚುನಾವಣೆ ಸಮಯದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಾ. ಬಸವರಾಜ ಕೇಲಗಾರ ಟಿಕೆಟ್ ಸಿಗದೆ ಇರುವ ಕಾರಣ ಅತೃಪ್ತರಾಗಿದ್ದಾರೆ. ಕೇಲಗಾರ ಅವರು ಇನ್ನೂ ಬಿಜೆಪಿಯಲ್ಲಿ ಗುರುತಿಸಕೊಳ್ಳದೆ ಇರುವುದರಿಂದ ಬಿಜೆಪಿಗೆ ತಲೆನೋವಾಗಿದೆ. ಇಂದು ಶಿವಮೊಗ್ಗ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಅವರು ಡಾ. ಕೇಲಗಾರ ಮನೆಗೆ ಭೇಟಿ ನೀಡಿ ಮನವೊಲಿಸಲು ಹರಸಾಹಸ ಪಡುತ್ತಿದ್ದಾರೆ.

ಇನ್ನು ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ ಮಾತನಾಡಿ, ಬಿಜೆಪಿ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಮಾಧ್ಯಮಗಳಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ. ನಮ್ಮಲ್ಲಿ ಭಿನ್ನಾಭಿಪ್ರಾಯ ಇಲ್ಲ. ನಾವೆಲ್ಲರೂ ಸೇರಿ ಪ್ರಚಾರಕ್ಕೆ ಬಂದಿದ್ದೇವೆ. ಇದು ರಾಜಕೀಯ ಪ್ರೇರಿತವಾದ ವಿಷಯವಾಗಿದೆ ಎಂದಿದ್ದಾರೆ.

ABOUT THE AUTHOR

...view details