ಕರ್ನಾಟಕ

karnataka

ETV Bharat / state

ಫಾರ್ಮಸಿಸ್ಟ್ ನೌಕರರ ಬೇಡಿಕೆ ಈಡೇರದಿದ್ದರೆ ಪ್ರತಿಭಟನೆ: ರಾಜಶೇಖರ್ ಪಾಟೀಲ್

ಸರ್ಕಾರ ತಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲವೆಂದು ಹಾವೇರಿ ಜಿಲ್ಲಾ ಸರ್ಕಾರಿ ಫಾರ್ಮಾಸಿಸ್ಟ್​ ನೌಕರರ ಸಂಘದ ಅಧ್ಯಕ್ಷ ರಾಜಶೇಖರ್ ಪಾಟೀಲ್ ಆರೋಪಿಸಿದ್ದಾರೆ.

rajashekar-patil-talk-against-to-govt
ರಾಜಶೇಖರ್ ಪಾಟೀಲ್

By

Published : Jan 3, 2020, 11:16 AM IST

ಹಾವೇರಿ: ಫಾರ್ಮಸಿಸ್ಟ್ ನೌಕರರನ್ನು ಸರ್ಕಾರ ಕಡೆಗಣಿಸುತ್ತಿದೆ ಎಂದು ಆರೋಪಿಸಿರುವ ಜಿಲ್ಲಾ ಸರ್ಕಾರಿ ಫಾರ್ಮಾಸಿಸ್ಟ್​ ನೌಕರರ ಸಂಘದ ಅಧ್ಯಕ್ಷ ರಾಜಶೇಖರ್​ ಪಾಟೀಲ್​ ಅವರು, ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ರವಾನಿಸಿದ್ದಾರೆ.

ನಗರದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ 6 ದಶಕಗಳಿಂದ ಸರ್ಕಾರ ತಮ್ಮ ಬೇಡಿಕೆಗಳಿಗೆ ಸ್ಪಂದಿಸಿಲ್ಲ. ಸರ್ಕಾರಿ ಫಾರ್ಮಸಿಸ್ಟ್ ನೌಕರರು ಅತಿಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದೇವೆ. ನಮಗೆ ಸರಿಯಾದ ವೇತನವಿಲ್ಲ, ಪ್ರಮೋಷನ್ ಕೂಡ ಇಲ್ಲವೆಂದು ಎಂದು ಆರೋಪಿಸಿದರು.

ರಾಜಶೇಖರ್ ಪಾಟೀಲ್, ಜಿಲ್ಲಾ ಫಾರ್ಮಾಸಿಸ್ಟ್​ ಸಂಘದ ಅಧ್ಯಕ್ಷ

ಕೈಗೆ ಕಪ್ಪುಬಟ್ಟೆ ಧರಿಸುವ ಮೂಲಕ ತಾವು ಪ್ರತಿಭಟನೆ ಆರಂಭಿಸುತ್ತೇವೆ. ಬೇಡಿಗೆಗಳಿಗೆ ಸ್ಪಂದಿಸದಿದ್ದರೆ ಐದು ಹಂತಗಳಲ್ಲಿ ಪ್ರತಿಭಟನೆ ನಡೆಸಲಾಗುವುದು. ಪ್ರತಿಭಟನೆಗೆ ಸರ್ಕಾರ ಸ್ಪಂದಸದಿದ್ದರೇ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗುತ್ತದೆ ಎಂದು ಪಾಟೀಲ್ ತಿಳಿಸಿದರು.

ಪ್ರತಿಭಟನೆ ವೇಳೆ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿಯೂ ಸಂಘ ತಿಳಿಸಿದರು.

For All Latest Updates

ABOUT THE AUTHOR

...view details