ಕರ್ನಾಟಕ

karnataka

ETV Bharat / state

ಸೂರ್ಯನ ಸುತ್ತ ಮೂಡಿದ ವರ್ಣದುಂಗುರ; ಕೌತುಕ ಕಂಡು ಮೊಬೈಲ್​ನಲ್ಲಿ ಸೆರೆ ಹಿಡಿದ ಹಾವೇರಿ ಜನ - ಕಾಮನಬಿಲ್ಲಿನ ಕಂಕಣದ ದೃಶ್ಯ

ಹಾವೇರಿಯಲ್ಲಿ ಇಂದು ಮಧ್ಯಾಹ್ನ ಆಗಸದಲ್ಲಿ ಕೌತುಕವೊಂದು ಕಾಣಸಿಕೊಂಡಿದ್ದು ಸ್ಥಳೀಯರು ತಮ್ಮ ತಮ್ಮ ಮೊಬೈಲ್​ನಲ್ಲಿ ಈ ಈ ದೃಶ್ಯವನ್ನು ಸೆರೆ ಹಿಡಿದರು. ಕೆಲವು ಈ ಕೌತುಕ ಕಂಡು ಮೂಗಿನ ಮೇಲೆ ಬೆರಳಿಟ್ಟು ಆಚ್ಚರಿ ಸಹ ವ್ಯಕ್ತಪಡಿಸಿದ್ದು ಕಂದು ಬಂದಿತು.

Rainbow ring around the sun in Haveri
ಸೂರ್ಯನ ಸುತ್ತ ಮೂಡಿದ ವರ್ಣದುಂಗುರ

By

Published : Aug 10, 2021, 10:13 PM IST

ಹಾವೇರಿ:ಜಿಲ್ಲಾ ಕೇಂದ್ರ ಹಾವೇರಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಮಂಗಳವಾರ ಮಧ್ಯಾಹ್ನ ಆಕಾಶದಲ್ಲಿ ಕೌತುಕವೊಂದು ನಿರ್ಮಾಣವಾಗಿತ್ತು.

ಸೂರ್ಯನ ಸುತ್ತ ಮೂಡಿದ ವರ್ಣದುಂಗುರ

ಮೋಡಗಳ ಮರೆಯಲ್ಲಿನ ಸೂರ್ಯನ ಸುತ್ತ ಕಾಮನಬಿಲ್ಲಿನ ಕಂಕಣ ಮೂಡಿತ್ತು. ಸೂರ್ಯನ ಸುತ್ತಲೂ ಮೂಡಿದ್ದ ಈ ಕಾಮನಬಲ್ಲಿನ ಕಂಕಣವನ್ನ ಜನರು ಕಣ್ತುಂಬಿಕೊಂಡರು. ವೈಜ್ಞಾನಿಕವಾಗಿ ಹ್ಯಾಲೋರಿಂಗ್ ಎಂದು ಕರೆಸಿಕೊಳ್ಳುವ ಈ ಕೌತುಕ ಈ ಪ್ರಮಾಣದ ಮೋಡಗಳಿದ್ದಾಗ ಮಾತ್ರ ಉಂಟಾಗುತ್ತದೆಯಂತೆ.

ಸೂರ್ಯನ ಸುತ್ತ ಮೂಡಿದ ವರ್ಣದುಂಗುರ

ಮೋಡಗಳಲ್ಲಿರುವ ಮಂಜಿನ ಹರಳುಗಳು ಸೂರ್ಯನಿಗೆ 22 ಡಿಗ್ರಿ ಅಥವಾ ಹೆಚ್ಚಿನ ಡಿಗ್ರಿಯಲ್ಲಿ ವಕ್ರೀಭವನ ಒಳಗಾದರೇ ಈ ವಿದ್ಯಮಾನ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಸೂರ್ಯನ ವೃತ್ತಾಕಾರವಾಗಿ ಇರುವ ಮೋಡಗಳ ಹರಳುಗಳ ಮೂಲಕ ಸೂರ್ಯನ ಕಿರಣ ಹಾದುಹೋದಾಗ ಏಳು ಬಣ್ಣಗಳ ಕಾಮನಬಿಲ್ಲು ಮೂಡುತ್ತದೆ.

ಸೂರ್ಯನ ಸುತ್ತ ಮೂಡಿದ ವರ್ಣದುಂಗುರ

ಸೂರ್ಯನ ಸುತ್ತ ಮೂಡಿದ್ದ ವರ್ಣದುಂಗುರ ನೋಡಲು ಆಗಿಮಿಸಿದ್ದ ಸ್ಥಳೀಯರು ತಮ್ಮ ತಮ್ಮ ಮೊಬೈಲ್​ನಲ್ಲಿ ಈ ಕೌತುಕದ ದೃಶ್ಯವನ್ನು ಸೆರೆ ಹಿಡಿದರು.

ಸೂರ್ಯನ ಸುತ್ತ ಮೂಡಿದ ವರ್ಣದುಂಗುರ

ABOUT THE AUTHOR

...view details