ಕರ್ನಾಟಕ

karnataka

ETV Bharat / state

ಸುಪ್ರೀಂ  ತೀರ್ಪು ನಿರಾಸೆಗೊಳಗಾದ ಆರ್​ ಶಂಕರ್... ಇಲ್ಲಿವೆ ಅವರ ಬೇಸರದ ನುಡಿಗಳು! ​

ಅನರ್ಹ ಶಾಸಕರ ಪ್ರಕರಣಕ್ಕೆ ಕುರಿತಂತೆ ಇಂದು ಸುಪ್ರೀಂಕೋರ್ಟ್​ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಆರ್. ಶಂಕರ್​ ಹಾಗೂ ಅವರ ಕಾರ್ಯಕರ್ತರಿಗೆ ಬಹಳ ನಿರಾಸೆ ಮೂಡಿಸಿದೆ.

ಆರ್​​ ಶಂಕರ್​

By

Published : Nov 13, 2019, 6:23 PM IST

Updated : Nov 13, 2019, 6:48 PM IST

ರಾಣೆಬೆನ್ನೂರು : ಅನರ್ಹ ಶಾಸಕರಿಗೆ ಸಂಬಂಧಿಸಿದಂತೆ ಇಂದು ಸುಪ್ರೀಂಕೋರ್ಟ್​ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಆರ್. ಶಂಕರ್​ ಮತ್ತವರ ಕಾರ್ಯಕರ್ತರಿಗೆ ಬಹಳ ನಿರಾಸೆ ಮೂಡಿದೆ.

ಆರ್​​ ಶಂಕರ್​

ಕ್ಷೇತ್ರದ ಅನರ್ಹ ಶಾಸಕ ಆರ್.ಶಂಕರ್​ ನಾನು ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗಿಲ್ಲ, ನನ್ನ ಶಾಸಕ ಸ್ಥಾನವನ್ನು ಸ್ಪೀಕರ್ ಅಮಾನತು ಮಾಡಿರುವುದು ಕಾನೂನು ಬಾಹಿರ ಎಂದು ಸುಪ್ರೀಂಕೋರ್ಟ್​ನಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿ ಕೋರ್ಟ್ ಮೊರೆ ಹೋಗಿದ್ದರು.

ಆದರೆ, ಇಂದು ಸುಪ್ರೀಂಕೋರ್ಟ್ ಸ್ಪೀಕರ್ ಆದೇಶವನ್ನು ಎತ್ತಿ ಹಿಡಿದಿದ್ದು, ಶಂಕರ ಮತ್ತೆ ಚುನಾವಣೆಗೆ ಸ್ಪರ್ಧಿಸಿಬೇಕಾದ ಅನಿವಾರ್ಯತೆ ಎದುರಾಗಿದೆ. ಆರ್.ಶಂಕರ್​ ಶಾಸಕ ಸ್ಥಾನದಿಂದ ಅಮಾನತು ಆಗದೆ ಮತ್ತೆ ಶಾಸಕರಾಗಿ ಮುಂದುವರೆಯುತ್ತಾರೆ ಎಂಬ ಆಸೆ ಇತ್ತು. ಆದರೆ ಸುಪ್ರೀಂಕೋರ್ಟ್ ಇವರ ಆಸೆಗೆ ತಣ್ಣೀರು ಎರಚಿದೆ.

Last Updated : Nov 13, 2019, 6:48 PM IST

ABOUT THE AUTHOR

...view details