ಹಾವೇರಿ : ರಾಣೇಬೆನ್ನೂರು ವಿಧಾಸಭಾ ಕ್ಷೇತ್ರದಿಂದ 2018ರಲ್ಲಿ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿದ್ದ ಆರ್.ಶಂಕರ್ ಬಿಜೆಪಿ ಜೊತೆ ಕೈಜೋಡಿಸಿ ಅಧಿಕಾರ ಕಳೆದುಕೊಂಡಿದ್ದಾರೆ. ಇದೀಗ ವಿಧಾನ ಪರಿಷತ್ ಟಿಕೇಟ್ ಪಡೆಯುವ ಮೂಲಕ ಪುನಃ ಅಧಿಕಾರ ಪಡೆಯಲು ಮುಂದಾಗಿದ್ದಾರೆ.
ಪರಿಷತ್‌ನಿಂದ ಮಂತ್ರಿ ಪಟ್ಟಕ್ಕೇರುವ ಆಕಾಂಕ್ಷೆ.. ಆರ್ ಶಂಕರ್‌ಗೆ ರಾಜಕೀಯ ಪುನಶ್ಚೇತನದ ಕನವರಿಕೆ!! - latest haveri news
ಈಗ ಅಧಿಕಾರವಿಲ್ಲದ ಕಾರಣ ಅವರ ಆಶ್ವಾಸನೆಗಳು ಮಾತಿನಲ್ಲೇ ಉಳಿದುಕೊಂಡಿವೆ. ಈ ಬಾರಿ ಎಂಎಲ್ಸಿಯಾಗಿ ಮತ್ತೆ ಸರ್ಕಾರದಲ್ಲಿ ಸಚಿವರಾದ್ರೆ ರಾಣೇಬೆನ್ನೂರ ಅಭಿವೃದ್ಧಿ ಹೊಂದುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.
2018ರಲ್ಲಿ ಶಾಸಕರಾಗಿದ್ದ ಆರ್.ಶಂಕರ್ ರಾಜೀನಾಮೆ ನೀಡಿ ಅನರ್ಹ ಎಂಬ ಹಣೆಪಟ್ಟ ಕಟ್ಟಿಕೊಂಡಿದ್ದರು. ನಂತರ ಉಪಚುನಾವಣೆಯಲ್ಲಿ ಬಿಜೆಪಿ ಟಿಕೇಟ್ ಕೈತಪ್ಪಿದ ಕಾರಣ ಅವರ ರಾಜಕೀಯ ಜೀವನ ರಾಣೇಬೆನ್ನೂರಿನಲ್ಲಿ ಮುಗಿಯಿತು ಎಂಬುದು ಮತದಾರರ ಮಾತಾಗಿತ್ತು. ಆದರೀಗ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದೆ. ಮತ್ತೆ ರಾಜಕೀಯ ಜೀವನಕ್ಕೆ ಮರಳುವ ಸಾಧ್ಯತೆಗಳು ಹೆಚ್ಚಾಗಿದೆ.
ಆರ್.ಶಂಕರ್ ಮೊದಲ ಬಾರಿಗೆ ರಾಣೇಬೆನ್ನೂರು ಕ್ಷೇತ್ರದಿಂದ ಆಯ್ಕೆಯಾದ ತಕ್ಷಣ ರಾಣೇಬೆನ್ನೂರ ನಗರವನ್ನು ಬೆಂಗಳೂರು ಮಾದರಿ ಮಾಡುವೆ ಎಂದು ಜನರಲ್ಲಿ ಆಶ್ವಾಸನೆ ನೀಡಿದ್ದರು. ಈಗ ಅಧಿಕಾರವಿಲ್ಲದ ಕಾರಣ ಅವರ ಆಶ್ವಾಸನೆಗಳು ಮಾತಿನಲ್ಲೇ ಉಳಿದುಕೊಂಡಿವೆ. ಈ ಬಾರಿ ಎಂಎಲ್ಸಿಯಾಗಿ ಮತ್ತೆ ಸರ್ಕಾರದಲ್ಲಿ ಸಚಿವರಾದ್ರೆ ರಾಣೇಬೆನ್ನೂರ ಅಭಿವೃದ್ಧಿ ಹೊಂದುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.