ಕರ್ನಾಟಕ

karnataka

ETV Bharat / state

ಅನಗತ್ಯವಾಗಿ ರಸ್ತೆಗಿಳಿದ ಬೈಕ್​ ಸವಾರರ ಪಾಡು ನೋಡಿ? - ಪೊಲೀಸ್​ರಿಂದ ಬೈಕ್​ ಸವಾರರಿಗೆ ಶಿಕ್ಷೆ

ಅನಗತ್ಯವಾಗಿ ರಸ್ತೆಗೆ ಇಳಿದ ಬೈಕ್​ ಸವಾರರಿಗೆ ಹಂಸಭಾವಿ ಎಎಸ್​ಐ ಎಂ.ಎ.ಆಸಾದಿ ಬಸ್ಕಿ ಹೊಡೆಸಿ, ಮತ್ತೊಮ್ಮೆ ಬೀದಿಗೆ ಬರದಂತೆ ಎಚ್ಚರಿಕೆ ನೀಡಿದ್ದಾರೆ.

Punishment for unnecessary bike riders
ಅನಗತ್ಯವಾಗಿ ರಸ್ತೆಗಿಳಿದ ಬೈಕ್​ ಸವಾರರ ಪಾಡು ನೋಡಿ..?

By

Published : Apr 12, 2020, 7:10 PM IST

ಹಾವೇರಿ:ಲಾಕ್​ಡೌನ್ ಆದೇಶವಿದ್ದರೂ ಅನಗತ್ಯವಾಗಿ ರಸ್ತೆಗಿಳಿದ ಬೈಕ್ ಸವಾರರಿಗೆ ಮಹಿಳಾ ಎಎಸ್ಐ ಕಿವಿ ಹಿಂಡಿಸಿ, ಬಸ್ಕಿ ಹೊಡೆಸಿದ ಘಟನೆ ನಡೆದಿದೆ.

ಅನಗತ್ಯವಾಗಿ ರಸ್ತೆಗಿಳಿದ ಬೈಕ್​ ಸವಾರರ ಪಾಡು ನೋಡಿ..?

ಜಿಲ್ಲೆ ಹಿರೇಕೆರೂರು ತಾಲೂಕಿನ ಚಿಕ್ಕೇರೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಹಂಸಭಾವಿ ಪೊಲೀಸ್ ಠಾಣೆಯ ಮಹಿಳಾ ಎಎಸ್ಐ ಎಂ.ಎ.ಅಸಾದಿ ಅವರು ಚಿಕ್ಕೇರೂರು ಗ್ರಾಮದಲ್ಲಿ ಯಾವುದೇ ತುರ್ತು ಕಾರಣವಿಲ್ಲದೆ ಮನೆಯಿಂದ ಹೊರಗೆ ಬಂದಿದ್ದ ಬೈಕ್​ ಸವಾರರಿಗೆ ಈ ಶಿಕ್ಷೆ ನೀಡಿ, ಉಳಿದವರಿಗೆ ಎಚ್ಚರಿಕೆ ನೀಡಿದ್ದಾರೆ.

50 ಬಸ್ಕಿ ಹೊಡೆಸಿ ಮನೆಯಿಂದ ಹೊರಗೆ ಬರದಂತೆ ಎಎಸ್ಐ ಆಸಾದಿ ಎಚ್ಚರಿಕೆ ನೀಡಿದರು. ಬಸ್ಕಿ ಹೊಡೆದು ಸುಸ್ತಾದ ಸವಾರರು ಇನ್ನೊಮ್ಮ ಮನೆಯಿಂದ ಹೊರಗೆ ಬರುವುದಿಲ್ಲ ಎಂದು ಹೇಳಿ ಕ್ಷಮೆ ಕೇಳಿದರು.

ABOUT THE AUTHOR

...view details