ಕರ್ನಾಟಕ

karnataka

ETV Bharat / state

ಸಿಂದಗಿಮಠದ ಪಟ್ಟಾಧ್ಯಕ್ಷರಿಂದ ಪುನೀತ್​​ಗೆ ಲಿಂಗದೀಕ್ಷೆ... ಮಠದಲ್ಲಿ ಈಗಲೂ ಇದೆ ಭಾವಚಿತ್ರ - ಹಾವೇರಿ ಸಿಂದಗಿಮಠ

ಕನ್ನಡ ಚಿತ್ರರಂಗದ 'ವೀರ ಕನ್ನಡಿಗ' ಪುನೀತ್ ರಾಜ್​ಕುಮಾರ್​ ವಿಧಿವಶರಾಗಿದ್ದು, ಎಲ್ಲರೂ ಕಂಬನಿ ಮಿಡಿಯುತ್ತಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳ ಜೊತೆ ಅಪರೂಪದ ಪ್ರೀತಿ-ನಂಟು ಇಟ್ಟುಕೊಂಡಿದ್ದ ಪುನೀತ್ ರಾಜ್​​ಕುಮಾರ್​ ಚಿಕ್ಕವರಾಗಿದ್ದಾಗ ಹಾವೇರಿ ಸಿಂದಗಿಮಠದ ಸ್ವಾಮೀಜಿಗಳಿಂದ ಲಿಂಗದೀಕ್ಷೆ ಮಾಡಿಸಿಕೊಂಡಿದ್ದರು.

Puneeth Rajakumar with sindagimata Haveri
Puneeth Rajakumar with sindagimata Haveri

By

Published : Oct 30, 2021, 12:09 AM IST

Updated : Oct 30, 2021, 5:51 AM IST

ಹಾವೇರಿ:ಸ್ಯಾಂಡಲ್​ವುಡ್​​ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ವಿಧಿವಶರಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ನಟ ಅಪ್ಪು ಇನ್ನು ನೆನಪು ಮಾತ್ರ.

ಪುನೀತ್​ ರಾಜ್​ಕುಮಾರ್​ ಚಿಕ್ಕ ಬಾಲಕನಿಂದಾಗ ಲಿಂಗಧಾರಣೆ ಮಾಡಿದ ಖ್ಯಾತಿ ಹಾವೇರಿ ಸಿಂದಗಿಮಠದ ಶಾಂತವೀರ ಪಟ್ಟಾಧ್ಯಕ್ಷರಿಗೆ ಸಲ್ಲುತ್ತದೆ. ಡಾ.ರಾಜಕುಮಾರ್​ ಒಮ್ಮೆ ಗದಗಿನ ಪುಟ್ಟರಾಜ್ ಗವಾಯಿಗಳಿಗೆ ಮದ್ರಾಸ್ ಮನೆಯಲ್ಲಿಯೇ ಪೂಜೆ-ಪ್ರಸಾದ ಸ್ವೀಕರಿಸಲು ಮನವಿ ಮಾಡಿದ್ದರು. ಆದರೆ ಪಂಡಿತ ಪುಟ್ಟರಾಜ್ ಗವಾಯಿಗಳು ಡಾ.ರಾಜಕುಮಾರ್‌ಗೆ ಲಿಂಗದೀಕ್ಷೆ ಮಾಡುವಂತೆ ಸಲಹೆ ನೀಡಿದ್ದರು ಎನ್ನಲಾಗಿದೆ.

ಇದನ್ನೂ ಓದಿರಿ:ಪುನೀತ್​ ರಾಜ್​ಕುಮಾರ್​​ ನಿಧನ.. ರಾಷ್ಟ್ರಧ್ವಜ ಹೊದಿಸಿ ಸಿಎಂ ಬೊಮ್ಮಾಯಿ ಗೌರವ

ಈ ಹಿನ್ನೆಲೆಯಲ್ಲಿ ಮದ್ರಾಸ್‌ಗೆ ಸಿಂದಗಿಮಠದ ಶಾಂತವೀರ ಪಟ್ಟಾಧ್ಯಕ್ಷರನ್ನು ಕರೆಸಿಕೊಂಡಿದ್ದ ಡಾ.ರಾಜ್ ತಮ್ಮ ಕುಟುಂಬದ ಸದಸ್ಯರಿಗೆ ಲಿಂಗದೀಕ್ಷೆ ಮಾಡಿಸಿದ್ದರು. ಈ ಸಂದರ್ಭದಲ್ಲಿ ಪುನೀತ್‌ಗೂ ಸಹ ಶಾಂತವೀರ ಪಟ್ಟಾಧ್ಯಕ್ಷರು ಲಿಂಗಧಾರಣೆ ಮಾಡಿದ್ದರು. ಈ ಭಾವಚಿತ್ರ ಹಾವೇರಿಯ ಸಿಂದಗಿಮಠದಲ್ಲಿ ಈಗಲೂ ಇದೆ. ಮಠಕ್ಕೆ ಬಂದ ಭಕ್ತರು ಈ ಅಪರೂಪದ ಚಿತ್ರವನ್ನ ಕಣ್ತುಂಬಿಕೊಳ್ಳುತ್ತಾರೆ.

ಪವರ್ ಸ್ಟಾರ್ ಪುನೀತ್ ನಿಧನವಾಗಿರುವದಕ್ಕೆ ಹಾವೇರಿ ಸಿಂದಗಿಮಠದ ಸಂಚಾಲಕರು ಸೇರಿದಂತೆ ಭಕ್ತರು ದುಃಖ ವ್ಯಕ್ತಪಡಿಸಿದ್ದಾರೆ. ಕನ್ನಡದ ಮೇರುನಟನನ್ನು ಇಷ್ಟು ಬೇಗ ಕಳೆದುಕೊಂಡಿದ್ದಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

Last Updated : Oct 30, 2021, 5:51 AM IST

ABOUT THE AUTHOR

...view details