ಹಾವೇರಿ:ಸುಡು ಬಿಸಿಲು ಸಹಿಸದೇ ಜನರು ಸಾಮಾಜಿಕ ಅಂತರದ ಬಾಕ್ಸ್ಗಳಲ್ಲಿ ತಾವು ತಂದ ಕೈಚೀಲಗಳನ್ನು ಸರತಿಯಲ್ಲಿಟ್ಟಿರುವ ದೃಶ್ಯ ಹಾವೇರಿ ನಗರದಲ್ಲಿ ಕಂಡುಬಂತು.
ಸುಡು ಬಿಸಿಲಿನಲ್ಲಿ ಪಡಿತರ ಪಡೆಯಲು ಸಾರ್ವಜನಿಕರ ಹರಸಾಹಸ - Haveri news
ಬಿಸಿಲಿನ ತಾಪದಿಂದ ದೂರ ಉಳಿದ ಜನ ನೆರಳಿನಲ್ಲಿ ದೂರ ದೂರದಲ್ಲಿ ನಿಂತು ಪಡಿತರ ಪಡೆದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಸುಡು ಬಿಸಿಲಿನಲ್ಲಿ ಪಡಿತರ ಪಡೆಯಲು ಸಾರ್ವಜನಿಕರ ಪರದಾಟ
ಒಂದು ಕಡೆ ನೆತ್ತಿಸುಡುವ ಬಿಸಿಲು ಮತ್ತೊಂದು ಕಡೆ ಪಡಿತರ ಪಡೆಯುವ ದಾವಂತ. ಪಡಿತರ ಪಡೆಯಲು ನ್ಯಾಯಬೆಲೆ ಅಂಗಡಿಗೆ ಹೋದರೆ ಕೊರೊನಾ ವೈರಸ್ ತಡೆಗೆ ಸಾಮಾಜಿಕ ಅಂತರದ ಬಾಕ್ಸ್ಗಳಿಂದಾಗಿ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಬಿಸಿಲು ಹಾಗೂ ಕೊರೊನಾ ಬಾಕ್ಸ್ನಿಂದಾಗಿ ಬೇರೆ ದಾರಿ ಕಾಣದೆ ಜನ ಬಿಸಿಲಿನಲ್ಲೇ ನಿಂತು ಅಕ್ಕಿ- ಗೋಧಿ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಬಿಸಿಲಿನ ತಾಪದಿಂದ ದೂರ ಉಳಿದ ಜನ ನೆರಳಿನಲ್ಲಿ ದೂರ ದೂರದಲ್ಲಿ ನಿಂತು ಪಡಿತರ ಪಡೆದರು.