ಕರ್ನಾಟಕ

karnataka

ETV Bharat / state

ವಕೀಲನ ಮೇಲೆ ಹಲ್ಲೆ ಆರೋಪ.. ಹಾನಗಲ್ ಠಾಣೆ ಪಿಎಸ್​ಐ ಅಮಾನತು

ಶಿಸ್ತು ಮತ್ತು ಕರ್ತವ್ಯ ನಿರ್ಲಕ್ಷ್ಯ ಆರೋಪ- ಹಾನಗಲ್​ ಪೊಲೀಸ್​ ಠಾಣಾ ಪಿಎಸ್​ಐ ಶ್ರೀಶೈಲ​ ಅಮಾನತು- ಎಸ್​ಪಿ ಹನುಮಂತರಾಯ ಆದೇಶ

PSI Srishaila suspended
ಪಿಎಸ್​ಐ ಅಮಾನತು

By

Published : Dec 29, 2022, 7:37 AM IST

ಹಾವೇರಿ: ಅಶಿಸ್ತು ಮತ್ತು ಕರ್ತವ್ಯ ನಿರ್ಲಕ್ಷ್ಯ ಆರೋಪ ಹಿನ್ನೆಲೆ ಹಾನಗಲ್​ ಪೊಲೀಸ್​ ಠಾಣಾ ಪಿಎಸ್​ಐ ಶ್ರೀಶೈಲ​ ಪಟ್ಟಣಶೆಟ್ಟಿ ಅವರನ್ನು ಕೆಲಸದಿಂದ ಅಮಾನತುಗೊಳಿಸಿ ಜಿಲ್ಲಾ ಎಸ್​ಪಿ ಹನುಮಂತರಾಯ ಆದೇಶ ಹೊರಡಿಸಿದ್ದಾರೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಿಸಲು ಪೊಲೀಸ್​ ಠಾಣೆಗೆ ತೆರಳಿದ್ದ ವಕೀಲರ ಮೇಲೆ ಹಲ್ಲೆ ಮಾಡಿದ ಆರೋಪ ಶ್ರೀಶೈಲ ಅವರ ಮೇಲಿದೆ.

ಏನಿದು ಆರೋಪ.. ಡಿಸೆಂಬರ್​ 27 ರಂದು ತಾಲೂಕಿನ ಗೆಜ್ಜಿಹಳ್ಳಿ ಗ್ರಾಮದ ಮಂಜುನಾಥ ಬಾರ್ಕಿ ಎಂಬುವರ ಮೇಲೆ ನಡೆದಿದ್ದ ಹಲ್ಲೆಗೆ ಸಂಬಂಧಿಸಿದಂತೆ ನ್ಯಾಯವಾದಿ ಶಿವಕುಮಾರ ತಳವಾರ ಎಂಬುವರು ಪ್ರಕರಣದ ಕುರಿತು ವಿಚಾರಿಸಲು ಹಾನಗಲ್​ ಪೊಲೀಸ್​ ಠಾಣೆಗೆ ಹೋಗಿದ್ದರು. ಈ ವೇಳೆ ಪಿಎಸ್​ಐ ಶ್ರೀಶೈಲ ಅವರು ಶಿವಕುಮಾರ ಅವರಿಗೆ ಅವಾಚ್ಯ ಪದಗಳಿಂದ ನಿಂದಿಸಿ ಸಾರ್ವಜನಿಕರ ಎದುರಿಗೆ ಅವಮಾನವಾಗುವಂತೆ ಮಾತನಾಡಿದ್ದಾರೆ. ಅಲ್ಲದೇ ಕೊರಳಪಟ್ಟಿ ಹಿಡಿದು ಜಾತಿ ನಿಂದನೆ ಮಾಡಿದ್ದು, ಹಲ್ಲೆ ಮಾಡಿ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಿದ್ದರು.

ಈ ಸಂಬಂಧ ನ್ಯಾಯವಾದಿ ಶಿವಕುಮಾರ ಅವರು ಶ್ರೀಶೈಲ ವಿರುದ್ಧ ಕಲಂ 323, 504, 506, ಸಹಕಲಂ 34 ಐಪಿಸಿ ಮತ್ತು ಜಾತಿನಿಂದನೆ ಪ್ರಕರಣ ದಾಖಲಿಸಿದ್ದರು. ಅಲ್ಲದೇ ಪೊಲೀಸ್​ ಠಾಣೆ ಎದುರಿಗೆ ಜಮಾಯಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಪಿಎಸ್‌ಐ ಅಮಾನತ್ತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಪ್ರಕರಣದ ಗಂಭೀರತೆ ಅರಿತ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹನುಮಂತರಾಯ ಅವರು ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.

ಇದನ್ನೂ ಓದಿ:ಕೈದಿಗಳ ಸಂಬಳ ಮೂರು ಪಟ್ಟು ಜಾಸ್ತಿ..! ರಾಜ್ಯದ ಕೈದಿಗಳಿಗೆ ಈಗ ದೇಶದಲ್ಲೆ ಹೆಚ್ಚು ಸಂಬಳ..!!

ABOUT THE AUTHOR

...view details