ಹಾವೇರಿ: ಅಬಕಾರಿ ಉಪ ಆಯುಕ್ತರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಹಾವೇರಿ ಬಾರ್ ಆಸೋಸಿಯೇಶನ್ ಸದಸ್ಯರು ಜಿಲ್ಲೆಯಾದ್ಯಂತ ಎಲ್ಲಾ ಖಾಸಗಿ ಬಾರ್ಗಳನ್ನು ಬಂದ್ ಮಾಡಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಅಬಕಾರಿ ಆಯುಕ್ತರಿಂದ ಕಿರುಕುಳ ಆರೋಪ... ಹಾವೇರಿಯಲ್ಲಿ ಬಾರ್ ಮಾಲೀಕರ ಪ್ರತಿಭಟನೆ! - haveri protest latest news
ಅಬಕಾರಿ ಉಪ ಆಯುಕ್ತರು ಲಂಚಕ್ಕಾಗಿ ನಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಹಾವೇರಿ ಬಾರ್ ಆಸೋಸಿಯೇಶನ್ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಅಬಕಾರಿ ಉಪ ಆಯುಕ್ತರಿಂದ ಕಿರುಕುಳ ಆರೋಪ...ಹಾವೇರಿ ಬಾರ್ ಆಸೋಸಿಯೇಶನ್ ವತಿಯಿಂದ ಪ್ರತಿಭಟನೆ!
ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಮದ್ಯದಂಗಡಿ ಮಾಲೀಕರು ಉಪ ಆಯುಕ್ತರ ವಿರುದ್ಧ ಕಿಡಿಕಾರಿದರು. ಅಬಕಾರಿ ಉಪ ಆಯುಕ್ತರು ಲಂಚಕ್ಕಾಗಿ ನಮಗೆ ಕಿರುಕುಳ ನೀಡುತ್ತಿದ್ದಾರೆಂದು ಮಾಲೀಕರು ಆರೋಪಿಸಿ, ಉಪ ಆಯುಕ್ತರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಾರ್ ಮಾಲೀಕರ ಪ್ರತಿಭಟನೆಯಿಂದಾಗಿ ಜಿಲ್ಲೆಯಲ್ಲಿ ಎಂಎಸ್ಐಎಲ್ ಹೊರತುಪಡಿಸಿ ಯಾವುದೇ ಖಾಸಗಿ ಮದ್ಯದಂಗಡಿಗಳು ಇಂದು ತೆರೆದಿರಲಿಲ್ಲ.