ರಾಣೆಬೆನ್ನೂರು:ನಗರದ 24x7 ಕುಡಿಯುವ ನೀರಿನ ಯೋಜನೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂದು ನಗರಸಭಾ ಕಾರ್ಯಾಲಯ ಮುಂದೆ ನಗರಸಭಾ ಸದಸ್ಯರ ಹೋರಾಟ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ರಾಣೆಬೆನ್ನೂರು: 24x7 ಕುಡಿಯುವ ನೀರು ಯೋಜನೆ ಕಾಮಗಾರಿ ಕಳಪೆ ಆರೋಪ, ಪ್ರತಿಭಟನೆ - Protest in Ranebennuru news
ಕಳಪೆ ಕಾಮಗಾರಿ ವಿರುದ್ಧ ನಗರಸಭಾ ಸದಸ್ಯರು ಹೋರಾಟ ಮಾಡುತ್ತಿದ್ದಾರೆ. ಇವರ ಹೋರಾಟಕ್ಕೆ ರೈತ ಸಂಘಟನೆ ಮತ್ತು ಉತ್ತರ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲ ಸೂಚಿಸಿದೆ.

ರಾಣೆಬೆನ್ನೂರು ನಗರಕ್ಕೆ ಅಮೃತ ಸಿಟಿ ಯೋಜನೆಯಡಿಯಲ್ಲಿ ಸುಮಾರು 118 ಕೋಟಿ ವೆಚ್ಚದ 24x7 ಕುಡಿಯುವ ನೀರಿನ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆದರೆ ಕಾಮಗಾರಿಯು ಸಂಪೂರ್ಣ ಕಳಪೆಯಾಗಿದೆ. ಇದರ ವಿರುದ್ಧ ಎರಡು ತಿಂಗಳ ಹಿಂದೆ ನಗರಸಭೆಯ ಎಲ್ಲಾ 34 ಸದಸ್ಯರು ಕಾಮಗಾರಿ ಕಳಪೆಯಾಗಿದೆ ಎಂದು ಸಹಿ ಮಾಡುವ ಮೂಲಕ ಜಿಲ್ಲಾಧಿಕಾರಿಗಳಿಗೆ ಹಾಗೂ ನಗರಸಭಾ ಆಯುಕ್ತರಿಗೆ ಮನವಿ ಮಾಡಲಾಗಿತ್ತು. ಆದರೆ ಇದರ ಬಗ್ಗೆ ತನಿಖೆ ಮಾಡಬೇಕಾದ ಜಿಲ್ಲಾಧಿಕಾರಿಗಳು ಕೂಡ ಯಾವುದೇ ಕ್ರಮಕೈಗೊಂಡಿಲ್ಲ ಎಂದು ನಗರಸಭಾ ಸದಸ್ಯ ನಿಂಗರಾಜ ಕೋಡಿಹಳ್ಳಿ ತಿಳಿಸಿದರು.
ರಾಣೆಬೆನ್ನೂರು ಬಂದ್ ಮಾಡುವುದಾಗಿ ಎಚ್ಚರಿಕೆ: ಕಳಪೆ ಕಾಮಗಾರಿ ವಿರುದ್ಧ ನಗರಸಭಾ ಸದಸ್ಯರು ಹೋರಾಟ ಮಾಡುತ್ತಿದ್ದಾರೆ. ಇವರ ಹೋರಾಟಕ್ಕೆ ರೈತ ಸಂಘಟನೆ ಮತ್ತು ಉತ್ತರ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲ ಸೂಚಿಸಿದೆ. ಈ ನಡುವೆ ಅಧಿಕಾರಿಗಳು ಕಾಮಗಾರಿ ಕಳಪೆ ಬಗ್ಗೆ ತನಿಖೆ ಮಾಡದಿದ್ದರೆ ಮುಂದಿನ ದಿನ ರಾಣೆಬೆನ್ನೂರು ಬಂದ್ ಮಾಡಲಾಗುವುದು ಎಂದು ನಗರಸಭಾ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.