ಕರ್ನಾಟಕ

karnataka

ETV Bharat / state

ಆಸರೆ ಮನೆಗಳ ಹಕ್ಕು ಪತ್ರ ನೀಡಲು ಆಗ್ರಹ: ನೆರೆ ಸಂತ್ರಸ್ತರಿಂದ ವಿನೂತನ ಪ್ರತಿಭಟನೆ - protests by flood affected victims

ಆಸರೆ ಮನೆಗಳ ಹಕ್ಕು ಪತ್ರ ನೀಡುವಂತೆ ಆಗ್ರಹಿಸಿ, ರೋಣ ತಹಶೀಲ್ದಾರ್​​ ಕಚೇರಿ ಬಳಿ ಗಾಡಗೋಳಿ ಗ್ರಾಮದ ನೆರೆ ಸಂತ್ರಸ್ತರು ತಲೆಯ ಮೇಲೆ ಕಲ್ಲು ಹೊತ್ತುಕೊಂಡು ವಿನೂತನ ಹೋರಾಟ ಮಾಡಿದರು.

ಆಸರೆ ಮನೆಗಳ ಹಕ್ಕು ಪತ್ರ ನೀಡುವಂತೆ ಆಗ್ರಹ
ಆಸರೆ ಮನೆಗಳ ಹಕ್ಕು ಪತ್ರ ನೀಡುವಂತೆ ಆಗ್ರಹ

By

Published : Mar 10, 2021, 8:55 PM IST

ಗದಗ:ಮಲಪ್ರಭಾ ನದಿ ಹಾಗೂ ಬೆಣ್ಣೆ ಹಳ್ಳ ಪ್ರವಾಹಕ್ಕೆ ಮನೆ ಕಳೆದುಕೊಂಡ ಕುಟುಂಬಗಳು ಸರ್ಕಾರದ ಆಸರೆ ಮನೆಗಳ ಹಕ್ಕು ಪತ್ರ ನೀಡುವಂತೆ ಆಗ್ರಹಿಸಿ, ಜಿಲ್ಲೆಯ ರೋಣದ ತಹಶೀಲ್ದಾರ್​ ಕಚೇರಿ ಎದುರು ವಿನೂತನವಾಗಿ ಪ್ರತಿಭಟನೆ ನಡೆಸಿದರು.

ನೆರೆ ಸಂತ್ರಸ್ತರಿಂದ ವಿನೂತನವಾಗಿ ಪ್ರತಿಭಟನೆ

ರೋಣ ತಹಶೀಲ್ದಾರ್​​ ಕಚೇರಿ ಬಳಿ ಗಾಡಗೋಳಿ ಗ್ರಾಮದ ನೆರೆ ಸಂತ್ರಸ್ತರು ತಲೆಯ ಮೇಲೆ ಕಲ್ಲು ಹೊತ್ತುಕೊಂಡು ಹೋರಾಟ ಮಾಡಿದರು. ಮಲಪ್ರಭಾ ನದಿ ಹಾಗೂ ಬೆಣ್ಣೆಹಳ್ಳ ಪ್ರವಾಹ ಸಂದರ್ಭದಲ್ಲಿ ನೂರಾರು ಕುಟುಂಬಗಳು ಮನೆ ಕಳೆದುಕೊಂಡಿವೆ. ಆ ಗಾಡಗೋಳಿ ಗ್ರಾಮಸ್ಥರಿಗೆ ಆಸರೆ ಮನೆಗಳನ್ನು ನಿರ್ಮಿಸಿ ಗ್ರಾಮ ಸ್ಥಳಾಂತರ ಮಾಡಲಾಗಿದೆ.

ಇದನ್ನೂ ಓದಿ: ಶಿವರಾತ್ರಿ: ಹಾವೇರಿ ಮಾರುಕಟ್ಟೆಯಲ್ಲಿ ಹೂ-ಹಣ್ಣುಗಳ ಖರೀದಿ ಜೋರು

ಆದ್ರೆ ಅಲ್ಲಿರುವ ನೂರಾರು ಕುಟುಂಬಗಳಿಗೆ ಇನ್ನೂ ಹಕ್ಕು ಪತ್ರಗಳನ್ನು ನೀಡಿಲ್ಲ. ಇದರಿಂದ ರೋಸಿಹೋದ ಸಂತ್ರಸ್ತರು, ಜನಪ್ರತಿನಿಧಿಗಳು, ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶೀಘ್ರದಲ್ಲೇ ಸಂತ್ರಸ್ತರ ಆಸರೆ ಮನೆಗಳ ಹಕ್ಕು ಪತ್ರ ನೀಡದೆ ಹೋದರೆ, ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details