ಕರ್ನಾಟಕ

karnataka

ETV Bharat / state

ಎಂಎಸ್​ಐಎಲ್​ ಮದ್ಯದಂಗಡಿ ಬಂದ್​ ಮಾಡುವಂತೆ ಪ್ರತಿಭಟನೆ.. - ಮದ್ಯದಂಗಡಿ ಬಂದ್​

ಅಬಕಾರಿ ಇಲಾಖೆ ಈ ಕೂಡಲೇ ಗ್ರಾಮದಲ್ಲಿನ ಎಂಎಸ್ಐಎಲ್ ಮದ್ಯದಂಗಡಿ ಬಂದ್ ಮಾಡಬೇಕು. ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಗ್ರಾಮಸ್ಥರು

By

Published : Jul 20, 2019, 11:10 AM IST

ಹಾವೇರಿ: ಗ್ರಾಮದಲ್ಲಿನ ಎಂಎಸ್ಐಎಲ್ ಮದ್ಯದಂಗಡಿ ಬಂದ್ ಮಾಡುವಂತೆ ಒತ್ತಾಯಿಸಿ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಇಟಗಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಎಂಎಸ್​ಐಎಲ್​ ಮದ್ಯದಂಗಡಿ ಬಂದ್​ ಮಾಡುವಂತೆ ಪ್ರತಿಭಟನೆ

ಗ್ರಾಮದಲ್ಲಿರುವ ಹರಿಹರ ಸಂಪರ್ಕಿಸುವ ರಸ್ತೆ ಬಂದ್ ಮಾಡಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮದಲ್ಲಿ ಮದ್ಯಸೇವನೆಯಿಂದ ಈಗಾಗಲೇ ಹಲವು ಅಪಘಾತಗಳಾಗಿವೆ. ಯುವಕರು ಸಹ ಮದ್ಯ ಸೇವನೆಯತ್ತ ಮುಖ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.

ಅಬಕಾರಿ ಇಲಾಖೆ ಈ ಕೂಡಲೇ ಗ್ರಾಮದಲ್ಲಿನ ಎಂಎಸ್ಐಎಲ್ ಮದ್ಯದಂಗಡಿ ಬಂದ್ ಮಾಡಬೇಕು. ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.

ABOUT THE AUTHOR

...view details