ಹಾವೇರಿ: ಲಾಕ್ಡೌನ್ನಿಂದ ಮದ್ಯದಂಗಡಿ ಬಂದ್ ಮಾಡಿರುವ ಪರಿಣಾಮ ಮದ್ಯವ್ಯಸನಿಗಳು ವಿಚಿತ್ರವಾಗಿ ವರ್ತಿಸುತ್ತಿದ್ದರೆ, ಜನಸಾಮಾನ್ಯರಲ್ಲಿ ಭಯ ಆವರಿಸಿದೆ.
ಲಾಕ್ಡೌನ್ನಿಂದ ಬಾರ್ ಬಂದ್: ಮದ್ಯ ಪ್ರಿಯರಿಗೆ ಕಾಡ್ತಿದೆ ಖಿನ್ನತೆ - ಹಾವೇರಿಯಲ್ಲಿ ಕೊರೊನಾ ಎಫೆಕ್ಟ್
ಹಾವೇರಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ಬಗ್ಗೆ ಇಲ್ಲಸಲ್ಲದ ಗಾಳಿ ಮಾತುಗಳಿಂದ ಬಹುತೇಕ ಜನ ಭಯಭೀತರಾಗಿದ್ದಾರೆ. ಮತ್ತೆ ಕೆಲ ಮದ್ಯ ವ್ಯಸನಿಗಳು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ.
ಖಿನ್ನತೆಗೆ ಒಳಗಾಗುತ್ತಿದ್ದಾರೆ ಮದ್ಯ ಪ್ರಿಯರು
ಮದ್ಯದಂಗಡಿಗಳು ಬಂದ್ ಆಗಿರುವುದರಿಂದ ಖಿನ್ನತೆಗೆ ಒಳಗಾದಂತೆ ವರ್ತಿಸುವ ಕುಡುಕರು ಮನೆಯ ಸದಸ್ಯರಿಗೆ ಬಡಾವಣಿಯಲ್ಲಿರುವ ಜನರಿಗೆ ಕಿರಿಕಿರಿ ಉಂಟುಮಾಡುತ್ತಿದ್ದಾರೆ. ಈ ಕುರಿತಂತೆ ಮನೆಯ ಸದಸ್ಯರು ಭಯಪಡುವ ಅವಶ್ಯಕತೆ ಇಲ್ಲಾ ಎನ್ನುತ್ತಿದ್ದಾರೆ ಮನೋವೈದ್ಯರು.
ಒಂದು ಚಟಕ್ಕೆ ದಾಸರಾಗಿ ನಂತರ ಅದನ್ನ ನಿಲ್ಲಿಸಿದಾಗ ದೇಹದಲ್ಲಿ ಹಲವು ಬದಲಾವಣೆಯಾಗುತ್ತವೆ. ಈ ರೀತಿಯಿಂದ ಚಟಕ್ಕೆ ಅಂಟಿಕೊಂಡವರು ವಿಚಿತ್ರವಾಗಿ ವರ್ತಿಸಲಾರಂಭಿಸುತ್ತಾರೆ. ಆ ಸಮಯದಲ್ಲಿ ಮನೆಯ ಸದಸ್ಯರು ಮದ್ಯವ್ಯಸನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.