ಕರ್ನಾಟಕ

karnataka

ETV Bharat / state

ಪ್ರಾಥಮಿಕ ಆರೋಗ್ಯ ಕೇಂದ್ರ ಸೀಲ್ ಡೌನ್: ಚಿಕಿತ್ಸೆಗಾಗಿ ರೋಗಿಗಳ ಪರದಾಟ - ರಾಣೆಬೆನ್ನೂರ ಚಿಕಿತ್ಸೆಗಾಗಿ ರೋಗಿಗಳ ಪರದಾಟ ಸುದ್ದಿ

ತಾಲೂಕಿನ ಇಟಗಿ ಮತ್ತು ಕುಪ್ಪೆಲೂರ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಆಶಾ ಕಾರ್ಯಕರ್ತೆ ಹಾಗೂ ವೈದ್ಯರಿಗೆ ಕೊರೊನಾ ‌ಲಕ್ಷಣಗಳು ಕಂಡು ಬಂದಿವೆ. ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಚಿಕಿತ್ಸಾ ಕೇಂದ್ರಗಳನ್ನು ಸೀಲ್​ ಡೌನ್​ ಮಾಡಿದ್ದಾರೆ.

ಪ್ರಾಥಮಿಕ ಆರೋಗ್ಯ ಕೇಂದ್ರ ಸೀಲ್ ಡೌನ್
ಪ್ರಾಥಮಿಕ ಆರೋಗ್ಯ ಕೇಂದ್ರ ಸೀಲ್ ಡೌನ್

By

Published : Jul 10, 2020, 11:32 AM IST

Updated : Jul 10, 2020, 12:11 PM IST

ರಾಣೆಬೆನ್ನೂರು: ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಂದ್ ಮಾಡಿದ ಕಾರಣ ಸ್ಥಳೀಯರು ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಕುಪ್ಪೆಲೂರ ಮತ್ತು ಇಟಗಿ ಗ್ರಾಮದಲ್ಲಿ ನಡೆದಿದೆ.

ಇಟಗಿ ಮತ್ತು ಕುಪ್ಪೆಲೂರ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆ ಹಾಗೂ ವೈದ್ಯರಿಗೆ ಕೊರೊನಾ ‌ಲಕ್ಷಣಗಳು ಕಂಡು ಬಂದಿವೆ. ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಚಿಕಿತ್ಸಾ ಕೇಂದ್ರಗಳನ್ನು ಸೀಲ್​ ಡೌನ್​ ಮಾಡಿದ್ದಾರೆ.

ಪ್ರಾಥಮಿಕ ಆರೋಗ್ಯ ಕೇಂದ್ರ ಸೀಲ್ ಡೌನ್

ಆದರೆ ಗ್ರಾಮದಲ್ಲಿ ಹೆಚ್ಚಾಗಿ ಬಡ ಜನರಿಗೆ ಸಣ್ಣಪುಟ್ಟ ರೋಗಗಳು ಬಂದರೆ ಪ್ರಾಥಮಿಕ ಕೇಂದ್ರದಲ್ಲೇ ಚಿಕಿತ್ಸೆ ಪಡೆಯುತ್ತಾರೆ. ಆದರೆ ಈಗ ಆಸ್ಪತ್ರೆ ಬಂದ್ ಮಾಡಿದ ಕಾರಣ ಖಾಸಗಿ ಆಸ್ಪತ್ರೆಗಳಿಗೆ ತೆರಳಬೇಕಿದೆ. ಅಲ್ಲಿಯೂ ಸಹ ಕೊರೊನಾ ಹಿನ್ನೆಲೆ ಆಸ್ಪತ್ರೆ ಒಳಗಡೆ ಬಿಡುತ್ತಿಲ್ಲ. ಇದರಿಂದ ರೋಗಿಗಳು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ರವೀಂದ್ರಗೌಡ ಪಾಟೀಲ್​ ಆರೋಪಿಸಿದ್ದಾರೆ.

ಆರೋಗ್ಯ ಇಲಾಖೆಯ ಅಧಿಕಾರಿಗಳು ತಕ್ಷಣ ಈ ಗ್ರಾಮದ ಆರೋಗ್ಯ ಕೇಂದ್ರಗಳ ಬಾಗಿಲು ತೆರೆಯಿಸಿ ಜನರ ಚಿಕಿತ್ಸೆಗೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

Last Updated : Jul 10, 2020, 12:11 PM IST

ABOUT THE AUTHOR

...view details