ಕರ್ನಾಟಕ

karnataka

ETV Bharat / state

ಹಾವೇರಿಯ ಸ್ವಗ್ರಾಮದಲ್ಲಿ ವಿದ್ಯಾರ್ಥಿ ನವೀನ್​ ಅಂತಿಮ ಕಾರ್ಯಕ್ಕೆ ಸಕಲ ಸಿದ್ಧತೆ

ಇಂದು ದುಬೈನಿಂದ ವಿದ್ಯಾರ್ಥಿ ನವೀನ್ ​ ಪಾರ್ಥಿವ ಶರೀರ ಬೆಂಗಳೂರಿಗೆ ಬಂದಿದ್ದು, ಗ್ರಾಮಸ್ಥರು ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಇತ್ತ ನವೀನ್ ಮನೆಯಲ್ಲಿ ಅಂತಿಮ ಪೂಜಾ ಕಾರ್ಯಗಳಿಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ.

Preparation going on in Naveen house at Haveri
ನವೀನ್​ ಮನೆಯಲ್ಲಿ ಅಂತಿಮ ಕಾರ್ಯಕ್ಕೆ ತಯಾರಿ

By

Published : Mar 21, 2022, 8:04 AM IST

Updated : Mar 21, 2022, 8:49 AM IST

ಹಾವೇರಿ:ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದ ಸಂದರ್ಭದಲ್ಲಿ ಸಾವನ್ನಪ್ಪಿದ್ದ ಕನ್ನಡಿಗ ವಿದ್ಯಾರ್ಥಿ ನವೀನ್ ಪಾರ್ಥಿವ ಶರೀರ ಬೆಂಗಳೂರಿನಿಂದ ಸ್ವಗ್ರಾಮದತ್ತ ಆಗಮಿಸುತ್ತಿದ್ದು, ಕುಟುಂಬಸ್ಥರು ಅಂತಿಮ ಪೂಜಾ ಕಾರ್ಯಗಳಿಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ವಿದ್ಯಾರ್ಥಿ ನವೀನ್​ ಅಂತಿಮ ಕಾರ್ಯಕ್ಕೆ ಸಕಲ ಸಿದ್ಧತೆ

ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿರುವ ನವೀನ್​ ನಿವಾಸದಲ್ಲಿ ಅಂತಿಮ ಪೂಜೆಗಳು ನಡೆಯಲಿದ್ದು, ಎಲ್ಲ ರೀತಿಯ ಸಿದ್ಧತೆಗಳು ನಡೆಯುತ್ತಿದೆ. ಇನ್ನು ನವೀನ್ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನಕ್ಕೂ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಪುತ್ರನ ಫೋಟೋಗೆ ಪೂಜೆ ಸಲ್ಲಸಿದ ತಾಯಿ

ವೀರಶೈವ ಸಂಪ್ರದಾಯದ ವಿಧಿ - ವಿಧಾನಗಳಂತೆ ಪಾರ್ಥಿವ ಶರೀರದ ಪೂಜಾ ಕಾರ್ಯಗಳು ನಡೆಯಲಿದ್ದು, ಗಣಪತಿ ಪೂಜೆಯೊಂದಿಗೆ ಪೂಜಾ ಕಾರ್ಯಗಳು ನಡೆಯಲಿವೆ. ಸಾರ್ವಜನಿಕರ ಅನುಕೂಲಕ್ಕಾಗಿ ಅರ್ಧ ಗಂಟೆಯಲ್ಲಿ ಪೂಜಾ ಕೆಲಸಗಳನ್ನು ಪೂರ್ಣ ಮಾಡಲಾಗುವುದು ಎಂದು ಚನ್ನವೀರಯ್ಯ ಶಾಸ್ತ್ರಿಗಳು ಹೇಳಿದರು.

ಇತ್ತ ಪುತ್ರನ ಫೋಟೋಗೆ ಪೂಜೆ ಸಲ್ಲಿಸಿ ಮಗನನ್ನು ನೆನೆದು ತಾಯಿ ವಿಜಯಲಕ್ಷ್ಮಿ ಕಣ್ಣೀರಿಟ್ಟಿದ್ದು, ಪಾರ್ಥಿವ ಶರೀರ 9 ಗಂಟೆಗೆ ಚಳಗೇರಿಯನ್ನು ತಲುಪಲಿದೆ ಎಂದು ಮೃತ ನವೀನ್​ ತಂದೆ ತಿಳಿಸಿದ್ದಾರೆ.

ಇದನ್ನೂ ಓದಿ: 21 ದಿನಗಳ ನಂತರ ತಾಯ್ನಾಡಿಗೆ ಬಂದ ನವೀನ್ ಪಾರ್ಥಿವ ಶರೀರ..ಸಿಎಂಗೆ ಧನ್ಯವಾದ ಸಮರ್ಪಿಸಿದ ಕುಟುಂಬ

Last Updated : Mar 21, 2022, 8:49 AM IST

For All Latest Updates

TAGGED:

ABOUT THE AUTHOR

...view details