ಹಾವೇರಿ:ವರದಾ ನದಿಯಲ್ಲಿ ಹೆಚ್ಚಾದ ನೀರಿನ ಪ್ರಮಾಣದಿಂದಾಗಿ ಆಸ್ಪತ್ರೆಗೆ ತೆರಳಲು ಗರ್ಭಿಣಿ ಮಹಿಳೆ ಪರದಾಡಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಹಾವೇರಿ ತಾಲೂಕಿನ ಬೆಳವಗಿ-ನೀರಲಗಿ ಸೇತುವೆ ಮೇಲೆ ನೀರು ಹರಿಯುತ್ತಿರುವ ಕಾರಣ ಆಸ್ಪತ್ರೆಗೆ ಹೋಗಲು ಗರ್ಭಿಣಿ ಮಹಿಳೆ ಪರದಾಡಿದ್ದಾಳೆ.
ಸೇತುವೆ ಜಲಾವೃತ: ಊರೊಳಗೆ ಹೋಗದ ಆಂಬ್ಯುಲನ್ಸ್... ಆಸ್ಪತ್ರೆಗೆ ತೆರಳಲು ಪರದಾಡಿದ ಗರ್ಭಿಣಿ - ಸೇತುವೆಯ ಮೇಲೆ ನೀರು ಹರಿಯುತ್ತಿದ್ದ ಕಾರಣ ಅಂಬ್ಯುಲೆನ್ಸ್ಗೆ ಅಡ್ಡಿ
ಸೇತುವೆಯ ಮೇಲೆ ನೀರು ಹರಿಯುತ್ತಿದ್ದ ಕಾರಣ ಆಂಬ್ಯುಲನ್ಸ್ ಊರೊಳಗೆ ಬರಲಾಗದೇ ಗರ್ಭಿಣಿ ಮಹಿಳೆ ಸಮಸ್ಯೆ ಎದುರಿಸಿದ ಘಟನೆ ಹಾವೇರಿಯಲ್ಲಿ ನಡೆದಿದೆ.
ಗುಯಿಲಗುಂದಿ ಗ್ರಾಮದ ದೀಪಾ ದೊಡ್ಡಮನಿ ಎಂಬ ಗರ್ಭಿಣಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಆಂಬ್ಯುಲನ್ಸ್ಗೆ ಕರೆ ಮಾಡಲಾಗಿತ್ತು. ಆದ್ರೆ ಸೇತುವೆ ಮೇಲೆ ನೀರು ಇದ್ದಿದ್ದರಿಂದ ನೀರಲ್ಲಿ ಬರಲಾಗದೆ ಆಂಬ್ಯುಲನ್ಸ್ ಸೇತುವೆ ಬಳಿ ನಿಂತಿತ್ತು. ನಂತರ ಆಂಬ್ಯುಲನ್ಸ್ ಸಿಬ್ಬಂದಿ ಮತ್ತು ಗ್ರಾಮಸ್ಥರು ಸೇರಿ ಗರ್ಭಿಣಿ ಮಹಿಳೆಯನ್ನು ಸುರಕ್ಷಿತವಾಗಿ ಸೇತುವೆ ದಾಟಿಸಿ ಆಂಬ್ಯುಲನ್ಸ್ ಹತ್ತಿಸಿದ್ದಾರೆ. ಅಂಬ್ಯುಲನ್ಸ್ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರ ನೆರವಿನಿಂದ ಗರ್ಭಿಣಿ ಮಹಿಳೆ ಸುರಕ್ಷಿತವಾಗಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದನ್ನೂ ಓದಿ :ಹಾವೇರಿ: ನದಿ ಮಧ್ಯೆ ಸಿಲುಕಿದ್ದ ಕುದುರೆ... ದಡ ಸೇರಿಸಿದ ಅಗ್ನಿ ಶಾಮಕ ಸಿಬ್ಬಂದಿ