ರಾಣೇಬೆನ್ನೂರು (ಹಾವೇರಿ):ಗ್ರಾಮಸ್ಥರ ವಿರೋಧದ ನಡುವೆಯೇ ಪೊಲೀಸರ ಭದ್ರತೆಯಲ್ಲಿ ಪ್ರಣವಾನಂದ ಸ್ವಾಮೀಜಿ ಛತ್ರಪತಿ ಶಿವಾಜಿ ಮೂರ್ತಿಗೆ ಮಾಲಾರ್ಪಣೆ ಮಾಡಿದರು.
ಶಿವಾಜಿ ಮೂರ್ತಿಗೆ ಮಾಲಾರ್ಪಣೆ ಮಾಡಿದ ಪ್ರಣವಾನಂದ ಸ್ವಾಮೀಜಿ - Sharanabasaveshwara Math at Aaremallapur
ರಾಣೇಬೆನ್ನೂರು ತಾಲೂಕಿನ ಆರೇಮಲ್ಲಾಪುರ ಗ್ರಾಮದ ಶರಣಬಸವೇಶ್ವರ ಮಠದ ವಿವಾದಿತ ಸ್ವಾಮೀಜಿ ಎಂದು ಖ್ಯಾತಿ ಪಡೆದಿರುವ ಪ್ರಣವಾನಂದ ಸ್ವಾಮೀಜಿಗೆ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಸಮಯದಲ್ಲಿ ಮಾಲಾರ್ಪಣೆ ಮಾಡಲು ಗ್ರಾಮಸ್ಥರು ಅವಕಾಶ ನೀಡಿರಲಿಲ್ಲ..
ಶಿವಾಜಿ ಮೂರ್ತಿಗೆ ಮಾಲಾರ್ಪಣೆ ಮಾಡಿದ ಪ್ರಣವಾನಂದ ಸ್ವಾಮೀಜಿ
ರಾಣೇಬೆನ್ನೂರು ತಾಲೂಕಿನ ಆರೇಮಲ್ಲಾಪುರ ಗ್ರಾಮದ ಶರಣಬಸವೇಶ್ವರ ಮಠದ ವಿವಾದಿತ ಸ್ವಾಮೀಜಿ ಎಂದು ಖ್ಯಾತಿ ಪಡೆದಿರುವ ಪ್ರಣವಾನಂದ ಸ್ವಾಮೀಜಿಗೆ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಸಮಯದಲ್ಲಿ ಮಾಲಾರ್ಪಣೆ ಮಾಡಲು ಗ್ರಾಮಸ್ಥರು ಅವಕಾಶ ನೀಡಿರಲಿಲ್ಲ.
ಈ ಸಲುವಾಗಿ ಪ್ರಣವಾನಂದ ಸ್ವಾಮೀಜಿ ಅವರು ಪೊಲೀಸ್ ಇಲಾಖೆಯ ಮೊರೆ ಹೋಗಿದ್ದರು. ಇಂದು ಪೊಲೀಸ್ ಇಲಾಖೆ ಬಂದೋಬಸ್ತ್ ನಡುವೆಯೇ ಶಿವಾಜಿ ಮೂರ್ತಿಗೆ ಮಾಲಾರ್ಪಣೆ ಮಾಡಲಾಗಿದೆ. ಕೆಲ ಗಂಟೆಗಳ ಕಾಲ ಆರೇಮಲ್ಲಾಪುರ ಗ್ರಾಮದಲ್ಲಿ ಬಿಗುವಿನ ವಾತವಾರಣ ಏರ್ಪಟ್ಟಿತು.