ಹಾವೇರಿ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರ ಶಕ್ತಿಯ, ಭಾವನೆಗಳ ಹಾಗೂ ರಾಷ್ಟ್ರಭಕ್ತಿಯ ಮಂದಿರ ಎಂದು ಶ್ರೀರಾಮಸೇನಾ ಮುಖಂಡ ಪ್ರಮೋದ್ ಮುತಾಲಿಕ್ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ರಾಮಮಂದಿರ ನಿರ್ಮಾಣಕ್ಕೆ ಪ್ರತಿಯೊಬ್ಬರು ಅಭಿಮಾನದಿಂದ ದೇಣಿಗೆ ನೀಡಿದ್ದಾರೆ. ಆದರೆ ಇಂತಹ ಕಾರ್ಯಕ್ಕೆ ಅಪಸ್ವರ ಎತ್ತಿರುವುದು ಮಾತ್ರ ಈ ರಾಜ್ಯದಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಎಂದ ಅವರು, ಎರಡೆರಡು ಸಲ ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾಗ ಜನರ ತೆರಿಗೆಯನ್ನ ಲೂಟಿ ಹೊಡೆದಿರುವ ಕುರಿತು ವಿವರಣೆ ನೀಡುತ್ತೀರಾ?. ರಾಜ್ಯಸಭಾ ಸದಸ್ಯರನ್ನ ಕೊಂಡು ತಂದಿರಲ್ಲಾ ಅದರ ಲೆಕ್ಕ ನೀಡ್ತಿರಾ? ಎಂದು ತಿರುಗೇಟು ನೀಡಿದರು.