ಹಾವೇರಿ: ಡ್ರಗ್ಸ್ ಕುರಿತಂತೆ ಪೊಲೀಸರಿಗೆ ಮಾಹಿತಿ ನೀಡಲು ಹೊರಟಿರುವ ಇಂದ್ರಜಿತ್ ಲಂಕೇಶ್ ನಡೆಗೆ ಧನ್ಯವಾದಗಳು. ಆದರೆ ನಿಮ್ಮ ಸಹೋದರಿಯೇ ಡ್ರಗ್ಸ್ ವ್ಯಸನಿ ಆಗಿದ್ದರಲ್ಲ, ಆಗ ಎಲ್ಲಿ ಹೋಗಿತ್ತು ಈ ಧೈರ್ಯ ಎಂದು ಇಂದ್ರಜಿತ್ ಲಂಕೇಶ್‌ಗೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರಶ್ನಿಸಿದ್ದಾರೆ.
ನಿಮ್ಮ ಸಹೋದರಿ ಡ್ರಗ್ಸ್ ವ್ಯಸನಿ ಆಗಿದ್ದಾಗ ಎಲ್ಲಿ ಹೋಗಿತ್ತು ಈ ಧೈರ್ಯ: ಇಂದ್ರಜಿತ್ಗೆ ಮುತಾಲಿಕ್ ಪ್ರಶ್ನೆ - ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್
ಡ್ರಗ್ಸ್ ಮಾಫಿಯಾದಲ್ಲಿ ರಾಜಕಾರಣಿಗಳಿದ್ದಾರೆ, ಪೊಲೀಸರಿದ್ದಾರೆ, ಶಾಸಕ ಹ್ಯಾರಿಸ್ ಪುತ್ರನ ಪಾತ್ರವಿದೆ ಎಂದು ಶ್ರೀರಾಮನೇಸೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗಂಭೀರ ಆರೋಪ ಮಾಡಿದ್ದಾರೆ.
![ನಿಮ್ಮ ಸಹೋದರಿ ಡ್ರಗ್ಸ್ ವ್ಯಸನಿ ಆಗಿದ್ದಾಗ ಎಲ್ಲಿ ಹೋಗಿತ್ತು ಈ ಧೈರ್ಯ: ಇಂದ್ರಜಿತ್ಗೆ ಮುತಾಲಿಕ್ ಪ್ರಶ್ನೆ pramod muthalik talks about indrajit lankesh](https://etvbharatimages.akamaized.net/etvbharat/prod-images/768-512-8649293-469-8649293-1599033429336.jpg)
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದ್ರಜಿತ್ ಲಂಕೇಶ್ ಈ ವಿಚಾರದಲ್ಲಿ ಚಿರಂಜೀವಿ ಸರ್ಜಾ ಹೆಸರು ತರಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈಗ ಹೀರೋ ಆಗಲು ಹೊರಟಿರುವ ಇಂದ್ರಜಿತ್ ಲಂಕೇಶ್ ಅಂದು ಯಾಕೆ ಸುಮ್ಮನಿದ್ದರು ಎಂದು ಪ್ರಶ್ನಿಸಿದರು.
ಬಹಳ ವರ್ಷಗಳಿಂದ ಡ್ರಗ್ಸ್ ಮಾಫಿಯಾ, ಲೈಂಗಿಕ ಮಾಫಿಯಾ ರಾಜ್ಯದಲ್ಲಿದೆ. ಈ ಕುರಿತಂತೆ ನಾನು 2009 ರಲ್ಲಿ ಹೋರಾಟಕ್ಕೆ ಇಳಿದಿದ್ದೆ. ಆದರೆ ಅಂದು ನನ್ನನ್ನೇ ಟಾರ್ಗೆಟ್ ಮಾಡಲಾಗಿತ್ತು ಎಂದು ಮುತಾಲಿಕ್ ತಿಳಿಸಿದರು. ಡ್ರಗ್ಸ್ ಮಾಫಿಯಾದಲ್ಲಿ ರಾಜಕಾರಣಿಗಳಿದ್ದಾರೆ, ಪೊಲೀಸರಿದ್ದಾರೆ ಎಂದು ಆರೋಪಿಸಿದರು. ಇದರಲ್ಲಿ ಶಾಸಕ ಹ್ಯಾರಿಸ್ ಪುತ್ರನ ಪಾತ್ರವಿದೆ ಎಂದು ಆರೋಪಿಸಿದರು. ಗೃಹ ಸಚಿವರು ಇದನ್ನ ಬೇರುಸಮೇತ ಕಿತ್ತೂಗೆಯುತ್ತೇನೆ ಎನ್ನುತ್ತಿರುವುದೆಲ್ಲಾ ಬರೀ ನಾಟಕ. ಎಲ್ಲಿಯವರೆಗೆ ಡ್ರಗ್ಸ್ ಕುರಿತಂತೆ ಜನಾಂದೋಲನವಾಗುವುದಿಲ್ಲವೋ ಅಲ್ಲಿಯವರೆಗೆ ಡ್ರಗ್ಸ್ ಮಾಫಿಯಾ ಇರುತ್ತೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.