ಕರ್ನಾಟಕ

karnataka

By

Published : May 17, 2021, 8:53 PM IST

Updated : May 17, 2021, 9:21 PM IST

ETV Bharat / state

ಲಸಿಕೆ ಬಗ್ಗೆ ನಕಾರಾತ್ಮಕವಾಗಿ ಮಾತನಾಡಿದ್ದಕ್ಕೆ ಈಗ ಸಮಸ್ಯೆ ಉಂಟಾಗಿರೋದು: ಪ್ರಲ್ಲಾದ್ ಜೋಶಿ

ಕೊರೊನಾ ಸೋಂಕಿತರು ಭಯಪಡುವ ಅವಶ್ಯಕತೆ ಇಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮರೋಪಾದಿಯಲ್ಲಿ ಕೊರೊನಾ ವಿರುದ್ಧ ಸಿದ್ದತೆ ನಡೆಸಿವೆ ಎಂದು ಕೇಂದ್ರ ಸಚಿವ ಪ್ರಲ್ಲಾದ್ ಜೋಶಿ ಹೇಳಿದರು.

 pralhad joshi outrage against congress
pralhad joshi outrage against congress

ಹಾವೇರಿ: ಈಗ ಲಸಿಕೆ ಬಗ್ಗೆ ಮಾತನಾಡುವವರೇ ಹಿಂದೆ ಲಸಿಕೆ ಬಗ್ಗೆ ನಕಾರಾತ್ಮಕವಾಗಿ ಹೇಳಿದ್ದರಿಂದ ಲಸಿಕೆ ಹಾಕಲು ಹಿನ್ನಡೆಯಾಯಿತು ಎಂದು ಕೇಂದ್ರ ಸಚಿವ ಪ್ರಲ್ಲಾದ್ ಜೋಶಿ ಆರೋಪಿದ್ದಾರೆ.

ಹಾವೇರಿ ಜಿಲ್ಲೆ ಶಿಗ್ಗಾವಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ 18 ಕೋಟಿ ಜನರಿಗೆ ಕೊರೊನಾ ಲಸಿಕೆ ಹಾಕಲಾಗಿದೆ. ರಾಜ್ಯದಲ್ಲಿ 1 ಕೋಟಿ 90 ಲಕ್ಷ ಜನರಿಗೆ ಲಸಿಕೆ ಹಾಕಲಾಗಿದೆ ಎಂದು ತಿಳಿಸಿದರು. ಕೊರೊನಾ ಸೋಂಕಿತರು ಭಯಪಡುವ ಅವಶ್ಯಕತೆ ಇಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮರೋಪಾದಿಯಲ್ಲಿ ಕೊರೊನಾ ವಿರುದ್ಧ ಸಿದ್ದತೆ ನಡೆಸಿವೆ ಎಂದು ತಿಳಿಸಿದರು.

ಕೇಂದ್ರ ಸಚಿವ ಪ್ರಲ್ಲಾದ್ ಜೋಶಿ

ಇದೇ ವೇಳೆ ಮಾತನಾಡಿದ ಬಸವರಾಜ್ ಬೊಮ್ಮಾಯಿ, ಕಾಂಗ್ರೆಸ್ ನಾಯಕರು ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ರಾಜ್ಯದಲ್ಲಿ ನಿತ್ಯ ಕೋವಿಡ್ ಬಂದ 97 ಪ್ರತಿಶತ ಜನ ಆರೋಗ್ಯವಂತರಾಗಿ ಮನೆ ಸೇರ್ತಾ ಇದ್ದಾರೆ. ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆಕ್ಕಿಂತ ಗುಣಮುಖರಾಗುವರು ಸಂಖ್ಯೆ ಅಧಿಕವಾಗಿದೆ. ಆರೈಕೆ ಶುಶ್ರೂಷೆ ಮತ್ತು ಸೂಕ್ತ ಔಷಧ ಒದಗಿಸಿದ್ದರಿಂದ ಕೊರೊನಾ ಪೀಡಿತರು ಗುಣಮುಖರಾಗುತ್ತಿದ್ದಾರೆ. ಇದೇ ನಮ್ಮ ಸರ್ಕಾರದ ಸಾಧನೆ ಎಂದರು.

Last Updated : May 17, 2021, 9:21 PM IST

ABOUT THE AUTHOR

...view details