ಹಾನಗಲ್:ಲಾಕ್ಡೌನ್ ಅವಧಿಯನ್ನು ಸದುಪಯೋಗ ಮಾಡಿಕೊಂಡ ಮಹಿಳೆಯೊಬ್ಬರು, ನಾಟಿ ಕೋಳಿಗಳನ್ನು ಸಾಕುವ ಮೂಲಕ ಕೈ ತುಂಬಾ ಹಣ ಗಳಿಸುತ್ತಿದ್ದಾರೆ.
ತಾಲೂಕಿನ ಹೋತನಹಳ್ಳಿ ಗ್ರಾಮದ ಲಕ್ಷ್ಮವ್ವ ಮಡಿವಾಳರ ಎಂಬುವವರು 10 ನಾಟಿ ಕೋಳಿಗಳನ್ನು ಸಾಕಾಣಿಕೆ ಮಾಡಲು ಮುಂದಾದರು. ಅದಾದ ಕೆಲವು ದಿನಗಳಲ್ಲಿ ಪ್ರತಿನಿತ್ಯ ನಾಟಿ ಕೋಳಿಗಳಿಗೆ ಜನರ ಬೇಡಿಕೆ ಹೆಚ್ಚಾಯಿತು.
ಬೇಡಿಕೆ ಹೆಚ್ಚಾದಂತೆಲ್ಲಾ ಮೊದಲು ಮಾರಿದ ಕೋಳಿಗಳ ಲಾಭದಿಂದ 100 ಕೋಳಿಗಳನ್ನು ಸಾಕಿ ಕೈತುಂಬ ಹಣ ಗಳಿಸಿದರು. ಅಂದು ಸಾಕಾಣಿಕೆ ಮಾಡಿದ ಕೋಳಿಗಳು ಇಂದು 300ಕ್ಕೂ ಹೆಚ್ಚು ಕೋಳಿಗಳಾಗಿವೆ.
ಇದರಿಂದ ನಮಗೆ ಕೈತುಂಬಾ ಆದಾಯ ಬರುತ್ತಿದೆ ಮತ್ತು ನಮ್ಮ ಕುಟುಂಬದ ನಿರ್ವಹಣೆಗೆ ಈ ಕೋಳಿ ಸಾಕಾಣಿಕೆ ಆರ್ಥಿಕವಾಗಿ ಸಹಾಕಾರಿಯಾಗಿದೆ ಎನ್ನುತ್ತಾರೆ ಲಕ್ಷ್ಮವ್ವ ಮಡಿವಾಳರ.