ಕರ್ನಾಟಕ

karnataka

ETV Bharat / state

ಲಾಕ್​ಡೌನ್​ ಪಾಲನೆ ಮಾಡದವರಿಗೆ ಬಿಸಿ ಮುಟ್ಟಿಸಿದ ಪೊಲೀಸರು - corona update

ಲಾಕ್ ಡೌನ್ ನಿಯಮ ಉಲ್ಲಂಘಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಮಾಸ್ಕ್ ಧರಿಸದೆ ಬೇಕಾಬಿಟ್ಟಿ ಓಡಾಡ್ತಿರೋರಿಗೆ ಪೊಲೀಸರು ಲಾಠಿ ರುಚಿ ತೋರಿಸಿ ಬಿಸಿ ಮುಟ್ಟಿಸ್ತಿದ್ದಾರೆ.

Police warning to people who was not follow the lockdown
ಲಾಕ್​ಡೌನ್​ ಪಾಲನೆ ಮಾಡದವರಿಗೆ ಬಿಸಿ ಮುಟ್ಟಿಸಿದ ಪೊಲೀಸರು

By

Published : Apr 24, 2020, 12:28 PM IST

ಹಾವೇರಿ: ಕೆಲವೆಡೆ ಲಾಕ್​ಡೌನ್​ ಪಾಲನೆ ಆದರೆ ಇನ್ನೂ ಕೆಲವೆಡೆ ಜನರು ಇದನ್ನು ಪಾಲಿಸುತ್ತಿಲ್ಲ. ಈ ಹಿನ್ನೆಲೆ ಕೆಲವರಿಗೆ ಪೊಲೀಸರು ಲಾಠಿರುಚಿ ತೋರಿಸಿದ್ದಾರೆ.

ಬಹುತೇಕ ದಿನಸಿ ಅಂಗಡಿಗಳ ಮುಂದೆ ಜನರು ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಖರೀದಿ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ‌. ವ್ಯಾಪಾರಸ್ಥರು ಸಹ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ಮಾಡ್ತಿದ್ದಾರೆ. ಆದರೆ, ಲಾಕ್ ಡೌನ್ ನಿಯಮ ಉಲ್ಲಂಘಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಮಾಸ್ಕ್ ಧರಿಸದೆ ಬೇಕಾಬಿಟ್ಟಿ ಓಡಾಡ್ತಿರೋರಿಗೆ ಪೊಲೀಸರು ಲಾಠಿ ರುಚಿ ತೋರಿಸಿ ಬಿಸಿ ಮುಟ್ಟಿಸ್ತಿದ್ದಾರೆ.

ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಪಾಲನೆ ಮಾಡದೆ ವ್ಯಾಪಾರದಲ್ಲಿ ತೊಡಗಿರೋರಿಗೆ ಪೊಲೀಸರು ಅಂಗಡಿ ಬಂದ್ ಮಾಡಿಸೋ ಖಡಕ್ ಎಚ್ಚರಿಕೆ ನೀಡ್ತಿದ್ದಾರೆ.

ABOUT THE AUTHOR

...view details