ಕರ್ನಾಟಕ

karnataka

ETV Bharat / state

ಮಾಸ್ಕ್ ಧರಿಸದೆ ಓಡಾಡುತ್ತಿದ್ದವರಿಗೆ ಪೊಲೀಸರಿಂದ ಖಡಕ್​ ವಾರ್ನಿಂಗ್​.. - ಹಾವೇರಿ ಪೊಲೀಸ್​ ​ ವಾರ್ನಿಂಗ್

ಲಾಕ್‌ಡೌನ್ ಸಡಿಲಿಕೆ ಆಗಿದ್ದರಿಂದ ಮಾಸ್ಕ್ ಧರಿಸದೆ ಬೇಕಾಬಿಟ್ಟಿ ಓಡಾಡುತ್ತಿದ್ದವರಿಗೆ ಸಿಪಿಐ ಚಿದಾನಂದ ನೇತೃತ್ವದ ಪೊಲೀಸರ ತಂಡ ಲಾಠಿ ತೋರಿಸಿ ಎಚ್ಚರಿಕೆ ನೀಡಿದ್ದಾರೆ.

Haveri police  Warning
ಮಾಸ್ಕ್ ಧರಿಸದೆ ಓಡಾಡುತ್ತಿದ್ದವರಿಗೆ ಪೊಲೀಸರಿಂದ ​ ವಾರ್ನಿಂಗ್​

By

Published : Apr 30, 2020, 5:17 PM IST

ಹಾವೇರಿ :ಜಿಲ್ಲೆಯಲ್ಲಿ ಜನ ಮಾಸ್ಕ್ ಧರಿಸಲು ಮೀನಾಮೇಷ ಎಣಿಸುತ್ತಿದ್ದಾರೆ. ಸಿಪಿಐ ಚಿದಾನಂದ ನೇತೃತ್ವದ ಪೊಲೀಸರ ತಂಡ ಮಾಸ್ಕ್ ಧರಿಸದೆ‌ ಓಡಾಡುತ್ತಿರುವವರನ್ನು ತಡೆದು ಮಾಸ್ಕ್ ಧರಿಸಿ ಹೋಗುವಂತೆ ಎಚ್ಚರಿಸಿದ್ದಾರೆ.

ಮಾಸ್ಕ್ ಧರಿಸದೆ ಓಡಾಡುತ್ತಿದ್ದವರಿಗೆ ಪೊಲೀಸರಿಂದ ವಾರ್ನಿಂಗ್​..

ಮಾರುಕಟ್ಟೆಯಲ್ಲಿನ ದಿನಸಿ ಅಂಗಡಿಗಳ ವ್ಯಾಪಾರಸ್ಥರು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ವ್ಯಾಪಾರದಲ್ಲಿ ತೊಡಗಿದ್ದವರಿಗೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ಮಾಡುವಂತೆ ಲಾಠಿ ತೋರಿಸಿ ಎಚ್ಚರಿಸಿದ್ದಾರೆ.

ಇದರಿಂದ ಜನ ಮತ್ತು ವ್ಯಾಪಾರಸ್ಥರು ಪೊಲೀಸರನ್ನ ನೋಡ್ತಿದ್ದಂತೆ ಮಾಸ್ಕ್ ಧರಿಸಿ ಓಡಾಡಲು ಆರಂಭಿಸಿದ್ದಾರೆ. ದಿನಸಿ ಮಾರುಕಟ್ಟೆಯಲ್ಲಿ ಪೊಲೀಸರು ಪರಿಶೀಲನೆಗಿಳಿದಿರೋದ್ರಿಂದ ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ವ್ಯಾಪಾರಸ್ಥರು ವ್ಯವಹಾರದಲ್ಲಿ ತೊಡಗಿದ್ದಾರೆ.

ABOUT THE AUTHOR

...view details