ಹಾನಗಲ್(ಹಾವೇರಿ): ಕಳ್ಳಭಟ್ಟಿ ತಯಾರಿಸುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ಹಲವಾರು ಬ್ಯಾರಲ್ಗಳಲ್ಲಿ ಇದ್ದ ಕಳ್ಳಭಟ್ಟಿ ನಾಶ ಮಾಡಿದ್ದಾರೆ.
ಹಾನಗಲ್ನಲ್ಲಿ ಕಳ್ಳಭಟ್ಟಿ ಅಡ್ಡೆ ಮೇಲೆ ಪೊಲೀಸರ ದಾಳಿ - haveri latest news
ಕಳ್ಳಭಟ್ಟಿ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದ ಪೊಲೀಸರು, ಕಳ್ಳಭಟ್ಟಿ ತಯಾರಿಸಲು ಬಳಕೆ ಮಾಡುತ್ತಿದ್ದ ಐವತ್ತು ಬ್ಯಾರಲ್, ಎರಡು ಕ್ವಿಂಟಾಲ್ ಬೆಲ್ಲ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ವಶಪಡಿಸಿಕೊಂಡು ನಾಶ ಮಾಡಿದ್ದಾರೆ.
ಬೃಹತ್ ಪ್ರಮಾಣದಲ್ಲಿ ಕಳ್ಳಭಟ್ಟಿ ತಯಾರಿಕೆ
ಜಿಲ್ಲೆಯ ಹಾನಗಲ್ ತಾಲೂಕಿನ ಹುಲಗಿನಕೊಪ್ಪ ಗ್ರಾಮದಲ್ಲಿ ಘಟನೆ ಜರುಗಿದೆ. ಕಳ್ಳಭಟ್ಟಿ ತಯಾರಿಕೆಗೆ ಬಳಕೆ ಮಾಡುತ್ತಿದ್ದ ಐವತ್ತು ಬ್ಯಾರಲ್, ಎರಡು ಕ್ವಿಂಟಾಲ್ ಬೆಲ್ಲ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡು ನಾಶ ಮಾಡಿದ್ದಾರೆ.
ಗ್ರಾಮದ ಹೊರವಲಯದಲ್ಲಿ ಇರೋ ಕೆರೆಯ ಬಳಿ ಕಳ್ಳಭಟ್ಟಿ ತಯಾರಿಕೆ ದಂಧೆ ನಡೆಯುತ್ತಿತ್ತು. ಸಿಪಿಐ ಚಿದಾನಂದ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Apr 28, 2020, 1:39 PM IST