ಹಾನಗಲ್ (ಹಾವೆರಿ):ಕೊರೊನಾ ವೈರಸ್ ಬಂದಾಗಿನಿಂದ ಪೊಲೀಸ್ ಸಿಬ್ಬಂದಿ ಕೆಲಸವಿಲ್ಲದೆ ಇರೋದೆ ವಿರಳ. ಆದ್ರೆ, ಹಾನಗಲ್ ತಾಲೂಕಿನ ಆಡೂರ ಪೊಲೀಸ್ ಠಾಣಾ ಸಿಬ್ಬಂದಿ ಇದೆಲ್ಲದರ ಮಧ್ಯೆ ಸ್ವಲ್ಪ ಬಿಡುವು ಮಾಡಿಕೊಂಡು 100ಕ್ಕೂ ಹೆಚ್ಚು ಗಿಡಗಳನ್ನ ನೆಟ್ಟು, ಪೋಷಿಸಿ ಬೆಳೆಸುತ್ತಿದ್ದಾರೆ.
ಬಿಡುವಿನ ವೇಳೆಯಲ್ಲಿ ಪರಿಸರ ಕಾಳಜಿ ಮೆರೆಯುತ್ತಿರುವ ಆಡೂರ ಪೊಲೀಸ್ ಸಿಬ್ಬಂದಿ - adooara police
ಹಾನಗಲ್ ತಾಲೂಕಿನ ಆಡೂರ ಪೊಲೀಸ್ ಠಾಣಾ ಸಿಬ್ಬಂದಿ ಕೊರೊನಾ ಮಧ್ಯೆಯೂ ಬಿಡುವು ಮಾಡಿಕೊಂಡು 100ಕ್ಕೂ ಹೆಚ್ಚು ಗಿಡಗಳನ್ನ ನೆಟ್ಟು, ಪೋಷಿಸಿ ಬೆಳೆಸುತ್ತಿದ್ದಾರೆ.
police
ಸಿಬ್ಬಂದಿಗಳಿಗೆ ಠಾಣಾ ಪಿ.ಎಸ್.ಐ.ಆಂಜನೆಯ ಸಾಥ್ ನೀಡಿ ಸಹಕರಿಸುತಿದ್ದಾರೆ. ಎಷ್ಟೋ ಜನ ಪರಿಸರ ದಿನದಂದು ಗಿಡನೆಟ್ಟು ಫಟೋಗಳಿಗೆ ಪೋಸ್ ಕೊಡುವುದೇ ಹೆಚ್ಚು.
ಆದ್ರೆ ಕೇವಲ ಪರಿಸರ ದಿನಕ್ಕೆ ಸಸಿಗಳ ಪಾಲನೆ ಸೀಮಿತಗೊಳಿಸದ ಪೊಲೀಸ್ ಸಿಬ್ಬಂದಿ ಬಿಡುವಿನ ವೇಳೆ ಇಂತಹ ಪರಿಸರ ಕಾಳಜಿ ಮೆರೆಯುತ್ತಿರುವುದು ಹೆಮ್ಮೆಯ ವಿಷಯ. ಇವರ ಕೆಲಸಕ್ಕೆ ನೋಡುಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.