ಹಾವೇರಿ: ಬುದ್ದಿಮಾಂದ್ಯ ವ್ಯಕ್ತಿಗೆ ಮಾಸ್ಕ್ ನೀಡುವ ಮೂಲಕ ಎಎಸ್ಐಯೊಬ್ಬರು ಮಾನವೀಯತೆ ಮೆರೆದ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.
ಬುದ್ಧಿಮಾಂದ್ಯನಿಗೆ ಮಾಸ್ಕ್ ನೀಡಿ ಮಾನವೀಯತೆ ಮೆರೆದ ಎಎಸ್ಐ - ಬುದ್ದಿಮಾಂದ್ಯ ವ್ಯಕ್ತಿಗೆ ಮಾಸ್ಕ್ ನೀಡಿ ಮಾನವೀಯತೆ ಮೆರೆದ ಎಎಸ್ಐ
ಜಿಲ್ಲೆಯಲ್ಲಿ ಎಎಸ್ಐಯೊರ್ವರು ಬುದ್ಧಿಮಾಂದ್ಯ ವ್ಯಕ್ತಿ ತಿರುಗಾಡುವುದನ್ನು ಕಂಡು ತಮ್ಮ ಬಳಿ ಇದ್ದ ಎರಡು ಮಾಸ್ಕ್ಗಳಲ್ಲಿ ಒಂದನ್ನ ಬುದ್ಧಿಮಾಂದ್ಯ ವ್ಯಕ್ತಿಗೆ ಹಾಕಿ ಮಾನವೀಯತೆ ಮರೆದಿದ್ದಾರೆ.
ಬುದ್ದಿಮಾಂದ್ಯ ವ್ಯಕ್ತಿಗೆ ಮಾಸ್ಕ್ ನೀಡಿ ಮಾನವೀಯತೆ ಮೆರೆದ ಎಎಸ್ಐ
ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಪೊಲೀಸ್ ಠಾಣೆಯ ಮಲ್ಲಿಕಾರ್ಜುನ ತಹಶಿಲ್ದಾರ್ ಮಾನವೀಯತೆ ಮೆರೆದ ಎಎಸ್ಐ. ಬಂಕಾಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಎಎಸ್ಐಗೆ ಬುದ್ಧಿಮಾಂದ್ಯ ವ್ಯಕ್ತಿ ತಿರುಗಾಡುವುದನ್ನು ಕಂಡು ತಮ್ಮ ಬಳಿ ಇದ್ದ ಎರಡು ಮಾಸ್ಕ್ಗಳಲ್ಲಿ ಒಂದನ್ನ ಬುಂದಿಮಾಂದ್ಯ ವ್ಯಕ್ತಿಗೆ ಹಾಕಿ ಮಾನವೀಯತೆ ಮರೆದಿದ್ದಾರೆ.
ಮಲ್ಲಿಕಾರ್ಜುನರ ಕರ್ತವ್ಯ ಪ್ರಜ್ಞೆ ಹಾಗೂ ಮಾನವೀಯತೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.