ಕರ್ನಾಟಕ

karnataka

ETV Bharat / state

ಪೊಲೀಸರ ತಪಾಸಣೆಗೂ ಕ್ಯಾರೇ ಅನ್ನುತ್ತಿಲ್ಲ ಜನ: ಹಾವೇರಿಯಲ್ಲಿ ಮಾಸ್ಕ್​ ಧರಿಸದ 38 ಸಾವಿರ ಜನರಿಗೆ ದಂಡ

ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಲಾಕ್​ಡೌನ್​ ಹೇರಿದ್ದರೂ ಜನರು ಮಾತ್ರ ಕ್ಯಾರೇ ಅನ್ನುತ್ತಿಲ್ಲ. ಪೊಲೀಸರು ಎಷ್ಟೇ ಹೇಳಿದರೂ ಕೇಳದೆ ಹೊರಗಡೆ ತಿರುಗಾಡುವವರ ಸಂಖ್ಯೆ ಹೆಚ್ಚಾಗಿದೆ. ಸಾರ್ವಜನಿಕರು ಕೈಜೋಡಿಸಿದರೆ ಕೊರೊನಾ ಆದಷ್ಟು ಬೇಗ ತೊಲಗಿಸಬಹುದು ಅಂತಾರೆ ಹಾವೇರಿ ಪೊಲೀಸರು.

By

Published : May 30, 2021, 8:44 AM IST

Haveri
ಹಾವೇರಿ

ಹಾವೇರಿ:ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ ಅಧಿಕವಾಗುತ್ತಿದೆ. ಸರ್ಕಾರ ಈ ಕುರಿತಂತೆ ಸಂಪೂರ್ಣ ಲಾಕ್​ಡೌನ್ ಜಾರಿಗೆ ತಂದಿದೆ. ಆದರೂ ಜಿಲ್ಲೆಯಲ್ಲಿ ಜನ ಅನಗತ್ಯ ಓಡಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಇಳಿದಿರುವ ಪೊಲೀಸ್ ಇಲಾಖೆ ವಾಹನ ಸವಾರರ ತಪಾಸಣೆ ನಡೆಸುತ್ತಿದೆ.

ಪೊಲೀಸರ ತಪಾಸಣೆಗೂ ಕ್ಯಾರೇ ಅನ್ನದ ಜನ

ಲಾಕ್​ಡೌನ್ ಆರಂಭವಾದಾಗಿನಿಂದ ಹಾವೇರಿ ಜಿಲ್ಲೆಯಲ್ಲಿ ಮಾಸ್ಕ್​ ಧರಿಸದೆ ಇರುವ 38,769 ಜನರಿಗೆ ತಲಾ ನೂರು ರೂಪಾಯಿ ದಂಡ ಹಾಕಲಾಗಿದೆ. ಇದರಿಂದ ಸುಮಾರು 38,76,900 ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಇನ್ನು ಇದುವರೆಗೊ ಜಿಲ್ಲೆಯಲ್ಲಿ ಮೂರು ಸಾವಿರ ವಾಹನಗಳನ್ನ ಸೀಜ್ ಮಾಡಲಾಗಿದೆ. ರಾಷ್ಟ್ರೀಯ ವಿಪತ್ತು ಕಾಯ್ದೆ ಉಲ್ಲಂಘನೆ ಮಾಡಿರುವ ಸುಮಾರು 209 ಪ್ರಕರಣಗಳನ್ನ ದಾಖಲಿಸಲಾಗಿದೆ.

ಜಿಲ್ಲೆಯಲ್ಲಿ ನಾವೆಷ್ಟು ಕಷ್ಟಪಟ್ಟು ಕೆಲಸ ಮಾಡಿದರೂ ಅಷ್ಟೇ. ಸಾರ್ವಜನಿಕರು ತಮ್ಮ ಜೊತೆ ಕೈ ಜೋಡಿಸಿದರೆ ಆದಷ್ಟು ಬೇಗ ಕೊರೊನಾ ಪೀಡಿತರ ಸಂಖ್ಯೆಯನ್ನ ಕಡಿಮೆ ಮಾಡಬಹುದು ಎನ್ನುವ ಅಭಿಪ್ರಾಯವನ್ನ ಹಾವೇರಿ ಎಸ್ಪಿ ಕೆ.ಜಿ.ದೇವರಾಜ್ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಬರೀ ರೇವಣ್ಣ, ಶಿವಲಿಂಗೇಗೌಡ ಮಾತನಾಡೋದಾದ್ರೆ ನಮ್ಮನ್ಯಾಕೆ ವಿಡಿಯೋ ಕಾನ್ಫರೆನ್ಸ್​ಗೆ ಕರೆಸಿದ್ರಿ?: ಎಂಎಲ್ಸಿ ಗೋಪಾಲಸ್ವಾಮಿ

ABOUT THE AUTHOR

...view details