ಹಾವೇರಿ: ಮುಖಕ್ಕೆ ಮಾಸ್ಕ್ ಧರಿಸದೇ ರಾಜಾರೋಷವಾಗಿ ಬೈಕ್ನಲ್ಲಿ ಸುತ್ತಾಡುತ್ತಿದ್ದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ದ್ವಿಚಕ್ರ ಸವಾರರು ಹಾಕಿದ್ದ ಶರ್ಟ್ ಬಿಚ್ಚಿಸಿ ಅದನ್ನೇ ಮುಖಕ್ಕೆ ಕಟ್ಟಿಸಿ ಕಳುಹಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಬೈಕ್ ಸವಾರರಿಗೆ ಬಿಸಿ ಮುಟ್ಟಿಸಿದ ಖಾಕಿ: ಬಟ್ಟೆ ಬಿಚ್ಚಿಸಿ ಮುಖಕ್ಕೆ ಕಟ್ಟಿಸಿದ ಪೊಲೀಸ್ರು - ಹಾವೇರಿ ಕೊಕರೊನಾ ಸುದ್ದಿ
ಮುಖಕ್ಕೆ ಮಾಸ್ಕ್ ಇಲ್ಲದೆ ಸಂಚರಿಸುತ್ತಿರುವುದನ್ನು ಗಮನಿಸಿದ ಶಿಗ್ಗಾವಿ ಪಟ್ಟಣದ ಪೊಲೀಸರು ಇದೀಗ ಒಂದು ಹೆಜ್ಜೆ ಮುಂದೆ ಹೋಗಿ, ಮಾಸ್ಕ್ ಇಲ್ಲದೆ ದ್ವಿ ಚಕ್ರವಾಹನದಲ್ಲಿ ಸಂಚರಿಸುತ್ತಿದ್ದವರನ್ನು ಗುರುತಿಸಿ ಅವರಿಗೆ ಅಂಗಿ ಬಿಚ್ಚಿಸಿ ಮುಖಕ್ಕೆ ಮಾಸ್ಕ ರೀತಿ ಕಟ್ಟಿಕೊಳ್ಳುವಂತೆ ಸೂಚಿಸಿದ್ದಾರೆ.
ಏಪ್ರಿಲ್ 14 ರವರೆಗೂ ಲಾಕ್ಡೌನ್ ಇದ್ದರೂ ಕೂಡ ದ್ವಿಚಕ್ರವಾಹನಗಳ ಓಡಾಟ ಮಾತ್ರ ನಿಂತಿಲ್ಲ. ಅದರಲ್ಲಿಯೂ ಮುಖಕ್ಕೆ ಮಾಸ್ಕ್ ಇಲ್ಲದೆ ಸಂಚರಿಸುತ್ತಿರುವುದನ್ನು ಗಮನಿಸಿದ ಶಿಗ್ಗಾಂವಿ ಪಟ್ಟಣದ ಪೊಲೀಸರು ಇದೀಗ ಒಂದು ಹೆಜ್ಜೆ ಮುಂದೆ ಹೋಗಿ, ಮಾಸ್ಕ್ ಇಲ್ಲದೆ ದ್ವಿ ಚಕ್ರವಾಹನದಲ್ಲಿ ಸಂಚರಿಸುತ್ತಿದ್ದವರನ್ನು ಗುರುತಿಸಿ ಅವರ ಅಂಗಿ ಬಿಚ್ಚಿಸಿ ಮುಖಕ್ಕೆ ಕಟ್ಟಿಕೊಳ್ಳುವಂತೆ ಹೇಳುತ್ತಿದ್ದಾರೆ.
ಇದರಿಂದ ಮಾಸ್ಕ್ ಧರಿಸುವವರ ಸಂಖ್ಯೆ ಸಹ ಹೆಚ್ಚಾಗುತ್ತಿದ್ದು, ಜೊತೆಗೆ ಸೋಂಕು ನಿಯಂತ್ರಣ ಕೂಡ ಸಾಧ್ಯವಾಗುತ್ತಿದೆ. ಅಷ್ಟೇ ಅಲ್ಲದೆ ದ್ವಿಚಕ್ರವಾಹನದಲ್ಲಿ ವಿನಾಕಾರಣ ಓಡಾಡುವವರ ಸಂಖ್ಯೆ ಕೂಡ ಕಡಿಮೆಯಾಗುತ್ತಿದೆ.