ಹಾವೇರಿ :ಕರ್ನಾಟಕ ಲೋಕಸೇವಾ ಆಯೋಗ ನಡೆಸುತ್ತಿದ್ದ ದ್ವಿತೀಯ ದರ್ಜೆ ಸಹಾಯಕ ಪರೀಕ್ಷೆಯಲ್ಲಿ ಕಿವಿಗೆ ಮೈಕ್ರೋಚಿಪ್ ಹಾಕಿಕೊಂಡು ನಕಲು ಮಾಡುತ್ತಿದ್ದ ಯುವತಿಯೋರ್ವಳನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಜಿಲ್ಲೆಯ ರಾಣೇಬೆನ್ನೂರು ನಗರದಲ್ಲಿ ನಡೆದಿದೆ.
ಕಿವಿಗೆ ಮೈಕ್ರೋಚಿಪ್ ಹಾಕಿಕೊಂಡು ನಕಲು ಮಾಡುತ್ತಿದ್ದ ಯುವತಿ ಪೊಲೀಸ್ ವಶಕ್ಕೆ - undefined
ನಗರದ ಆರ್ಟಿಇಎಸ್ ಪರೀಕ್ಷಾ ಕೇಂದ್ರದಲ್ಲಿ ನಡೆಯುತ್ತಿದ್ದ ದ್ವಿತೀಯ ದರ್ಜೆ ಸಹಾಯಕರ ಪರೀಕ್ಷೆಯಲ್ಲಿ ಯುವತಿಯೋರ್ವಳು ಕಿವಿಗೆ ಮೈಕ್ರೋಚಿಪ್ ಹಾಕಿಕೊಂಡು ನಕಲು ಮಾಡುತ್ತಿದ್ದಳು.
ಜಿಲ್ಲೆಯ ಹಾನಗಲ್ ತಾಲೂಕಿನ ಕೋಣನಕೊಪ್ಪ ಗ್ರಾಮದ ಅಶ್ವಿನಿ ಕೊಂಡೋಜಿ (20) ಸಿಕ್ಕಿಬಿದ್ದ ಯುವತಿ. ನಗರದ ಆರ್ಟಿಇಎಸ್ ಪರೀಕ್ಷಾ ಕೇಂದ್ರದಲ್ಲಿ ದ್ವಿತೀಯ ದರ್ಜೆ ಸಹಾಯಕರ ಪರೀಕ್ಷೆ ನಡೆಯುತ್ತಿತ್ತು, ಈಕೆ ಎಡಕಿವಿಗೆ ಮೈಕ್ರೋಚಿಪ್ ಹಾಕಿಕೊಂಡು ಪರೀಕ್ಷೆ ಬರೆಯುತ್ತಿದ್ದಳು. ಸಂಶಯಗೊಂಡು ಕೊಠಡಿ ಮೇಲ್ವಿಚಾರಕರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ನಕಲು ಮಾಡುತ್ತಿರುವುದು ಬೆಳಿಕಿಗೆ ಬಂದಿದೆ.
ತಕ್ಷಣವೇ ಕೊಠಡಿ ಮೇಲ್ವಿಚಾರಕರು ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ನಕಲು ಮಾಡುತ್ತಿದ್ದ ಯುವತಿಯನ್ನು ಗ್ರಾಮೀಣ ಠಾಣೆಗೆ ಒಪ್ಪಿಸಿದ್ದು, ನಕಲು ಮಾಡುತ್ತಿದ್ದ ಬಗ್ಗೆ ಯುವತಿ ತಪ್ಪೊಪ್ಪಿಕೊಂಡಿದ್ದಾಳೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.