ಹಾವೇರಿ: ತಿವ್ರ ಕುತೂಹಲ ಮೂಡಿಸಿದ್ದ ರಾಣೇಬೆನ್ನೂರು ತಾಲೂಕು ಪ್ರಾಥಮಿಕ ಸಹಕಾರಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಗೆಲವು ಸಾಧಿಸುವ ಮೂಲಕ ಮತ್ತೆ ಅಧಿಕಾರ ಹಿಡಿದಿದ್ದಾರೆ.
ರಾಣೇಬೆನ್ನೂರು ಪಿಎಲ್ಡಿ ಬ್ಯಾಂಕ್ ಚುನಾವಣೆ: ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಜಯ - ರಾಣೇಬೆನ್ನೂರು ಪಿಎಲ್ಡಿ ಬ್ಯಾಂಕ್ ಚುನಾವಣೆ
ಇಂದು ರಾಣೇಬೆನ್ನೂರು ತಾಲೂಕು ಪ್ರಾಥಮಿಕ ಸಹಕಾರಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಚುನಾವಣೆ ನಡೆಯಿತು. ಇದರಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಗೆಲವು ಸಾಧಿಸುವ ಮೂಲಕ ಮತ್ತೆ ಅಧಿಕಾರ ಹಿಡಿದಿದ್ದಾರೆ.
![ರಾಣೇಬೆನ್ನೂರು ಪಿಎಲ್ಡಿ ಬ್ಯಾಂಕ್ ಚುನಾವಣೆ: ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಜಯ ರಾಣೇಬೆನ್ನೂರು ಪಿಎಲ್ಡಿ ಬ್ಯಾಂಕ್ ಚುನಾವಣೆ](https://etvbharatimages.akamaized.net/etvbharat/prod-images/768-512-5911000-thumbnail-3x2-mng.jpg)
ಒಟ್ಟು 14 ಸ್ಥಾನಗಳನ್ನು ಹೊಂದಿದ ಪಿಎಲ್ಡಿ ಬ್ಯಾಂಕ್ಗೆ ಈಗಾಗಲೇ 5 ಕ್ಷೇತ್ರ ಅವಿರೋಧ ಆಯ್ಕೆ ಮಾಡಲಾಗಿದ್ದು, ಅವುಗಳಲ್ಲಿ ಬಿಜೆಪಿಯಿಂದ 2 ಹಾಗೂ ಕಾಂಗ್ರೆಸ್ 3 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಇನ್ನುಳಿದ 9 ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 6 ಸ್ಥಾನ ಮತ್ತು ಬಿಜೆಪಿ 3 ಸ್ಥಾನ ಪಡೆದುಕೊಂಡವು.
ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದವರು :ಹಲಗೇರಿಯಿಂದ ನಾಗರಾಜ ಬಣಕಾರ, ಮೇಡ್ಲೇರಿಯಿಂದ ಹನುಮಪ್ಪ ಪೂಜಾರ, ಕುಪ್ಪೇಲೂರನಿಂದ ಕರೇಗೌಡ ಬಾಗೂರ, ಬಿಲ್ಲಹಳ್ಳಿಯಿಂದ ಕುಮಾರ ಬತ್ತಿಕೊಪ್ಪದ, ಜೋಯಿಸರಹರಳಹಳ್ಳಿಯಿಂದ ವೀರನಗೌಡ ಪೊಲೀಸಗೌಡ್ರ, ಕರೂರನಿಂದ ಭೀಮಪ್ಪ ಕುಡುಪಲಿ, ಗುಡಗೂರ ಕ್ಷೇತ್ರದ ಶಾರದಾ ಕೆಂಚರೆಡ್ಡಿ,ಕಾಕೋಳ ಕ್ಷೇತ್ರದ ಬಸವಣೆಪ್ಪ ಪಾರ್ವತಿ, ಗುಡ್ಡಗುಡ್ಡಾಪುರ ಕ್ಷೇತ್ರದ ದುಂಡೆಪ್ಪ ಹರಿಜನ ಆಯ್ಕೆಯಾಗಿದ್ದಾರೆ.